ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯಶಾಂತಿ

 ವಿಜಯಶಾಂತಿ

ವಿಜಯಶಾಂತಿ ಚಲನಚಿತ್ರರಂಗದ “ಲೇಡಿ ಸೂಪರ್‌ಸ್ಟಾರ್", "ದಿ ಆಕ್ಷನ್ ಕ್ವೀನ್ ಆಫ್ ಇಂಡಿಯನ್ ಸಿನಿಮಾ" ಮುಂತಾದ ವಿಶೇಷಣಗಳಿಂದ ಖ್ಯಾತರಾದವರು. 'ಕರ್ತವ್ಯಂ' ಚಿತ್ರದಲ್ಲಿನ ಮಹಿಳಾ ಪೊಲೀಸ್ ಪಾತ್ರ ನಿರ್ವಹಣೆಗಾಗಿ 1990 ರಲ್ಲಿ ಅವರಿಗೆ ಅತ್ಯುತ್ತಮ ನಟಿಗಾಗಿ ಸಲ್ಲುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಂದಿತ್ತು.

ವಿಜಯಶಾಂತಿ 1966ರ ಜೂನ್ 24ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ಸತ್ತಿ ಶ್ರೀನಿವಾಸ್ ಪ್ರಸಾದ್. ತಾಯಿ ಸತ್ತಿ ವರಲಕ್ಷ್ಮಿ. ಚೆನ್ನೈನಲ್ಲಿ ಜನಿಸಿದರೂ, ಅವರು ತಮ್ಮ ತೆಲಂಗಾಣ ಬೇರುಗಳೊಂದಿಗೆ ಹೆಚ್ಚು ಗುರುತಿಸಿಕೊಂಡವರು. ಅವರ ಚಿಕ್ಕಮ್ಮ ವಿಜಯಲಲಿತಾ ನಟಿ ಮತ್ತು ನಿರ್ಮಾಪಕಿಯಾಗಿ ಹೆಸರಾಗಿದ್ದರು.

ವಿಜಯಶಾಂತಿ ಅವರು ತಮ್ಮ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಚಲನಚಿತ್ರ ವೃತ್ತಿಜೀವನದಲ್ಲಿ, ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿನ ಸುಮಾರು 200 ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ವಿಜಯಶಾಂತಿ ಅವರ ಅಭಿನಯದ ಕೆಲವು ಗಮನಾರ್ಹ ಚಲನಚಿತ್ರಗಳಲ್ಲಿ ನೇತ್ರಿಕಣ್ (1981), ನೇತಿ ಭಾರತಂ (1983), ಅಗ್ನಿ ಪರ್ವತಂ (1985), ಸವಾಲು (1984), ಪ್ರತಿಘಟನಾ (1985), ಮುದ್ದುಲ ಕೃಷ್ಣಯ್ಯ (1986), ರೆಪತಿ ಪೌರುಲು (1986), ಪಸಿವಾದಿ ಪ್ರಣಮ್ (1987), ಮುವ್ವಕಿ ಮೊಡುಗು (1988), ಆಟಕು ಯಮುಡು ಅಮ್ಮಾಯಿಕಿ ಮೊಗುಡು (1989), ಜಾನಕಿ ರಾಮುಡು (1988), ಮುದ್ದುಲ ಮಾವಯ್ಯ (1989), ಕೊಂಡವೀಟಿ ದೊಂಗ (1990), ಕರ್ತವ್ಯಂ (1990), ಇಂದ್ರುಡು ಚಂದ್ರುಡು (1989), ಲಾರಿ ಚಾಲಕ (1990), ಸಾಥ್ರುವು (1990), ನಾಯಕ (1990), (1992), ರೌಡಿ ಇನ್ಸ್‌ಪೆಕ್ಟರ್ (1992), ಮೊಂಡಿ ಮೊಗುಡು ಪೆಂಕಿ ಪೆಲ್ಲಂ (1992), ಚಿನರಾಯುಡು (1993),  ಪೊಲೀಸ್ ಲಾಕಪ್ (1993), ಒಸೆ ರಾಮುಲಮ್ಮ (1997) ಮುಂತಾದವು ಸೇರಿವೆ.

ವಿಜಯಶಾಂತಿ ಅವರು 1989 ರಲ್ಲಿ ಕೆ. ವಿಶ್ವನಾಥ್ ಅವರ 'ಸ್ವಾತಿ ಮುತ್ಯಂ'ನ ಹಿಂದಿಯಲ್ಲಿನ ರೂಪಾಂತರವಾದ "ಈಶ್ವರ್" ನಲ್ಲಿ ಅನಿಲ್ ಕಪೂರ್ ಅವರೊಂದಿಗೆ ನಟಿಸಿದ್ದರು. ಇದಲ್ಲದೆ ಮುಕದ್ದರ್ ಕಾ ಬಾದ್‌ಶಾ", "ಅಪರಾಧಿ" ಮತ್ತು ಎನ್. ಚಂದ್ರು ನಿರ್ದೇಶಿಸಿದ ಕರ್ತವ್ಯಂನ ರೂಪಾಂತರವಾದ "ತೇಜಸ್ವಿನಿ"ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.  ಕನ್ನಡದಲ್ಲಿಯೂ ಕೆರಳಿದ ಹೆಣ್ಣು, ಸಿಂಹ ಗರ್ಜನೆ, ವಂದೇ ಮಾತರಂ ಚಿತ್ರಗಳಲ್ಲಿ ನಟಿಸಿದ್ದರು.

ವಿಜಯಶಾಂತಿ ಅವರಿಗೆ ಒಂದು ರಾಷ್ಟ್ರೀಯ ಶ್ರೇಷ್ಠ ನಟಿ ಪ್ರಶಸ್ತಿ ಅಲ್ಲದೆ,  ಆಂಧ್ರಪ್ರದೇಶ ರಾಜ್ಯದ ನಾಲ್ಕು ಅತ್ಯುತ್ತಮ ನಟಿ ನಂದಿ ಪ್ರಶಸ್ತಿಗಳು, ಏಳು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು 2003 ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ,  ತಮಿಳುನಾಡು ಸರ್ಕಾರದ ಕಲೈಮಾಮಣಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ವಿಜಯಶಾಂತಿ ಅವರು ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ.

On the birthday of actress Vijayashanthi 🌷🌷🌷




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!