ಕವಿಯ ಆ ದಿನ
ಎಚ್ ಎಸ್ ವಿ ಅವರ ಸುಪುತ್ರ
ಎಚ್ ವಿ ಸಂಜಯ ಅವರ ಹೃದಯ ತಟ್ಟುವ ಕವಿತೆ
ಕವಿಯ ಆ ದಿನ...
ಎಚ್‌ವಿ. ಸಂಜಯ
ಕವಿಯ ಕೊನೆ ದಿನಗಳಲ್ಲಿ,
ಕಿಟಕಿಗಳು ಸದಾ ತೆರೆದಿದ್ದವು,
ತಂಗಾಳಿಗಾಗಿ ಅಲ್ಲ,
ಹಾರಿ ಹೋದ ರೂಪಕಗಳು,
ಬರಬಹುದೇನೋ ಅಂತ...
ಮೇಲೆ ತಣ್ಣನೆಯ ಕಾಫಿ,
ಬಾಡಿದ ಹೂಗುಚ್ಛ, ಚದುರಿದ
ಪುಸ್ತಕಗಳು.
ಅರ್ಧದಲ್ಲೇ ನಿಂತ ಸಾಲುಗಳು,
ಭಾಷೆಯೇ ದಣಿದು ಮಲಗಿದಂತೆ.
ಕಟ್ಟಕಡೆಯ ಆ ರಾತ್ರಿ,
ಗೋಡೆ ಗಡಿಯಾರ ನಿಂತಿತು,
ಕರ್ತವ್ಯ ಮರೆತಂತೆ.
ಕವಿ ಕಣ್ಣು ಮುಚ್ಚಿದ್ದು,
ಸೋತವನಂತೆ ಅಲ್ಲ,
ತನ್ನ ಜೀವಪ್ರೀತಿಯ ಕವನದ
ಕೊನೆಯ ಸಾಲು ರಚಿಸಿದಂತೆ.

ಕಾಮೆಂಟ್‌ಗಳು