ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎ.ಎಮ್.ರಾಜಾ

 


ಎ. ಎಮ್. ರಾಜಾ

ಎ. ಎಮ್. ರಾಜಾ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲಿ ಒಬ್ಬರು.  ‘ಸ್ಕೂಲ್ ಮಾಸ್ಟರ್' ಚಿತ್ರದಲ್ಲಿ ಇವರು ಹಾಡಿರುವ ‘ಅತಿ ಮಧುರ ಅನುರಾಗ' ಗೀತೆ ಇಂದಿಗೂ ಜನಪ್ರಿಯ.

ರಾಜಾ ಅವರು 1929ರ ಜುಲೈ 1ರಂದು ಚಿತ್ತೂರಿನಲ್ಲಿ ಜನಿಸಿದರು. ಮುಂದೆ ರೇಣುಕಾಪುರಂಗೆ ಬಂದು ಬಿ.ಎ. ಪದವಿ ಪಡೆದರು.  

ರಾಜಾ ಅವರು ಓದುತ್ತಿದ್ದ ದಿನಗಳಲ್ಲೆ ತಾವೇ ಗೀತೆ ರಚಿಸಿ, ಸ್ವರ ಸಂಯೋಜಿಸಿ, ಕೆ. ವಿ. ಮಹಾದೇವನ್ ಅವರ ತಂಡದ ವಾದ್ಯಸಹಕಾರದೊಂದಿಗೆ 'ಎಚ್ಎಂವಿ' ಸಂಸ್ಥೆಗಾಗಿ ಹಾಡುಗಳನ್ನು ಧ್ವನಿಮುದ್ರಿಸಿದ್ದರು.  ಆ ಹಾಡುಗಳು ಆಕಾಶವಾಣಿಯಲ್ಲೂ ಬಿತ್ತರಗೊಂಡಾಗ ಚಿತ್ರರಂಗದ ಗಮನ ಸೆಳೆದರು.  ಮೊದಲಿಗೆ ಎಸ್ ಎಸ್ ವಾಸನ್ ಅವರ ‘ಸಂಸಾರಂ’ ಹಾಗೂ ಅದೇ ಸಮಯದಲ್ಲಿ 'ರಾಜಾಂಬಾಳ್' ಚಿತ್ರ ಹಾಗೂ ಎಂಜಿಆರ್ ಅಭಿನಯದ 'ಕುಮಾರಿ' ಚಿತ್ರಗಳಿಗೆ ಹಾಡಿದರು.

ಮುಂದೆ ಅವರು ತಮಿಳು, ತೆಲುಗು,  ಕನ್ನಡ, ಮಲಯಾಳ, ಸಿಂಹಳದ ನೂರಾರು ಚಲನಚಿತ್ರಗಳಿಗೆ ಹಾಡಿದರು.  ಕನ್ನಡದಲ್ಲಿ 'ಸೋದರಿ', 'ಶುಕ್ರದೆಸೆ', ‘ಸ್ಕೂಲ್ ಮಾಸ್ಟರ್’, ‘ಭೂಕೈಲಾಸ', 'ರಾಯರ ಸೊಸೆ', 'ಭಕ್ತ ವಿಜಯ', 'ಭಾಗ್ಯಚಕ್ರ', 'ರೇಣುಕಾ ಮಹಾತ್ಮೆ', 'ಸದಾರಮೆ' ಮುಂತಾದ ಚಿತ್ರಗಳಲ್ಲಿ  ಹಾಡಿದ್ದರು.

ರಾಜಾ ಅವರು 1989ರ ಎಪ್ರಿಲ್ 8ರಂದು ಕನ್ಯಾಕುಮಾರಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಲೆಂದು ಪಯಣಿಸುವ ಸಂದರ್ಭದಲ್ಲಿ,  ತಿರುನಲ್ವೇಲಿಯ ವಲ್ಲಿಯೂರು ಎಂಬಲ್ಲಿ ಹೊರಟಿದ್ದ ರೈಲುಗಾಡಿ ಹತ್ತುವಾಗ ಬಿದ್ದು ಮರಣಕ್ಕೀಡಾದರು.

On the birth anniversary of playback singer A M Rajah🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!