ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ಯಾಮಸುಂದರ ಶರ್ಮಾ

 

ಶಿಕ್ಷಣ ತಜ್ಞ, ವಿಜ್ಞಾನ ಲೇಖಕ ಮತ್ತು ರಸಪ್ರಶ್ನೆ ಖ್ಯಾತಿಯ 
ಎಲ್. ಎಸ್. ಶ್ಯಾಮಸುಂದರ ಶರ್ಮ ನಿಧನ


ಖ್ಯಾತ ಶಿಕ್ಷಕ, ಶಿಕ್ಷಣತಜ್ಞ, ಸಂಶೋಧಕ,  ಆಡಳಿತಗಾರ ಎಲ್. ಎಸ್. ಶ್ಯಾಮಸುಂದರ ಶರ್ಮಾ ಅವರು ನಿಧನರಾಗಿದ್ದಾರೆ.

ಶ್ಯಾಮಸುಂದರ ಶರ್ಮಾ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೃಷಿ ಮಾಡಿದ್ದವರು. ರಸಪ್ರಶ್ನೆ ಶರ್ಮಾ ಎಂದೇ ಪರಿಚಿತರಾಗಿದ್ದ ಇವರು ಮಕ್ಕಳಿಗಾಗಿ ಬರೆಯುವುದರಲ್ಲಿ ಹೆಚ್ಚಿನ ಒಲವು ಹೊಂದಿದ್ದರು.  ನಮ್ಮ ಪುಟ್ಟ ಪ್ರಯೋಗ ಶಾಲೆ, ಎಲ್ಲಿಂದ ಬಂತು ಬೂಸ್ಟ್ (ಜೀವ ವಿಜ್ಞಾನ), ಸುಣ್ಣದಿಂದ ಅಮೃತಶಿಲೆ (ಭೌತ ವಿಜ್ಞಾನ) ಮುಂತಾದ ಪ್ರಸಿದ್ಧ ಕೃತಿಗಳು ಇವುಗಳಲ್ಲಿ ಸೇರಿವೆ. ಕಲೆ, ಸಂಗೀತ, ಸ್ಕೌಟಿಂಗ್, ಸಮಾಜ ಸೇವೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಇವರು  ಶ್ರೀ ವಾಣಿ ಶಿಕ್ಷಣ ಸಂಸ್ಥೆ, ಮಾಗಡಿಯ ಶ್ರೀ ವಾಣಿ ವಿಜ್ಞಾನ ವನ ಹಾಗೂ ಶ್ರೀವಿದ್ಯಾ ಕೇಂದ್ರ ಸ್ಮಾರ್ಟ್ ಸ್ಕೂಲ್ ಸಂಸ್ಥಾಪಕರಾಗಿದ್ದರು.

ಎಲ್.ಎಸ್. ಶಾಮಸುಂದರ ಶರ್ಮಾ 2005 ರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದರು. ಸುದೀರ್ಘ ವ್ಯಾಪ್ತಿಯ ಶಿಕ್ಷಣದ ಅನುಭವ ಹೊಂದಿದ್ದ ಪ್ರಸಿದ್ಧ ಶಿಕ್ಷಣ ತಜ್ಞರಾಗಿದ್ದ ಅವರು ವಿಜ್ಞಾನ ಮತ್ತು ಮೌಲ್ಯ ಶಿಕ್ಷಣವನ್ನು ಬೋಧಿಸುವಲ್ಲಿ ಅಪಾರ ಪರಿಣತಿ ಹೊಂದಿದ್ದರು.

ಶರ್ಮಾ ಅವರು ಒಬ್ಬ ಮಹಾನ್ ದಾರ್ಶನಿಕ, ಸಮರ್ಥ ಆಡಳಿತಗಾರ ಮತ್ತು ಸಮರ್ಪಿತ ಸಮಾಜ ಸೇವಕರಾಗಿ ಹೆಸರು ಗಳಿಸಿದ್ದರು. ಶರ್ಮಾ ಅವರು ದೂರದರ್ಶನದಲ್ಲಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಅಪಾರ ಜನಪ್ರಿಯತೆ ಗಳಿಸಿ ಮನೆಮಾತಾಗಿದ್ದರು. ಅವರು ಶಿಕ್ಷಣ ಪ್ರಸಾರಕ್ಕಾಗಿ ಆಕಾಶವಾಣಿ ಸಮಿತಿಯ ಸದಸ್ಯರಾಗಿದ್ದರು. ಅವರು NCERT ಮತ್ತು DSERT ಗಾಗಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು ಅನೇಕ ಕಾರ್ಯಾಗಾರಗಳಲ್ಲಿ ನೂರಾರು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಶಾಮಸುಂದರ ಶರ್ಮಾ ಅವರ ಸೇವೆ ವ್ಯಾಪಿಸಿತ್ತು. ಅವರು ಅನನ್ಯ ಆಸ್ಪತ್ರೆ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿದ್ದರು. ಭಾರತೀಯ ಭೂವೈಜ್ಞಾನಿಕ ಸಂಘ. ಕರ್ನಾಟಕದ ಆರ್ಕಿಡ್ ಸಂಘದ ಫೆಲೊ ಆಗಿದ್ದರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷರಾಗಿ ಹಾಗೂ ಅನೇಕ ಶೈಕ್ಷಣಿಕ, ಕಲೆ, ಸಂಗೀತ ಮತ್ತು ಸಾಂಸ್ಕೃತಿಕ  ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಅಗಲಿದ ಚೇತನಕ್ಕೆ ನಮನ 🌷🙏🌷

Respects to departed soul Great Educationist, writer and Quiz Master L. S. Shyamasundar Sharma 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!