ಗ್ಯಾರಿ ಶೋಬರ್ಸ್
ಕ್ರಿಕೆಟ್ ಲೋಕ ಕಂಡ ಮಹಾನ್ ಸರ್ವಾಂಗೀಣ ಆಟಗಾರ ಗ್ಯಾರಿ ಸೋಬರ್ಸ್ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಗ್ಯಾರಿ ಸೋಬರ್ಸ್ 1936ರ ಜುಲೈ 28ರಂದು ಜನಿಸಿದರು. ಬಾರ್ಬಡಾಸ್ ಪ್ರಾಂತ್ಯದವರಾದ ಸೋಬರ್ಸ್ 1954ರಿಂದ 1974ರ ಸುದೀರ್ಘ ಕಾಲ ವೆಸ್ಟ್ ಇಂಡೀಜ್ ತಂಡವನ್ನು ಪ್ರತಿನಿಧಿಸಿ ಬ್ಯಾಟಿಂಗ್, ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆಯಲ್ಲಿ ತಮ್ಮ ಕಾಲದ ಶ್ರೇಷ್ಠರಲ್ಲಿ ಪ್ರಮುಖರಾಗಿ ಕಂಗೊಳಿಸಿದ್ದರು.
ಟೆಸ್ಟ್ ಕ್ರಿಕೆಟ್ ಮಾತ್ರವೇ ಪ್ರಧಾನವಾಗಿದ್ದ ಯುಗದಲ್ಲಿ ಸೋಬರ್ಸ್ 93 ಟೆಸ್ಟ್ ಪಂದ್ಯಗಳಲ್ಲಿ 57.78 ಸರಾಸರಿಯಲ್ಲಿ 26 ಶತಕ ಮತ್ತು 30 ಅರ್ಧ ಶತಕಗಳೊಂದಿಗೆ 8,032 ರನ್ ಗಳಿಸಿದ್ದರು. 365 ರನ್ ಸಹಾ ಒಮ್ಮೆ ಗಳಿಸಿದ್ದರು. ಇವೆಲ್ಲವುಗಳ ಜೊತೆ 235 ವಿಕೆಟ್ ಗಳಿಸಿದ್ದರು.109 ಕ್ಯಾಚ್ ಹಿಡಿದಿದ್ದರು.
ಗ್ಯಾರಿ ಸೋಬರ್ಸ್ 2026ರ ಜುಲೈ 17ರಂದು ನಿಧನರಾದರು. ಕ್ರಿಕೆಟ್ ಲೋಕ ತನ್ನ ಒಬ್ಬ ಯುಗಪುರುಷನನ್ನು ಕಳೆದುಕೊಂಡಿದೆ.
Respects to departed soul Great all rounder in Cricket History, Sir Garfield St Aubrun Sobers 🌷🙏🌷

ಕಾಮೆಂಟ್‌ಗಳು