ಅನುರಾಧಾ ಆನಂದ್
ಅನುರಾಧಾ ಆನಂದ್
ಅನುರಾಧಾ ಆನಂದ್ ಅವರು ಪ್ರಸಿದ್ಧ ಸಂಗೀತ ಮತ್ತು ಕಲಾ ಲೋಕದ ಕುಟುಂಬಕ್ಕೆ ಸೇರಿದ ಹಿರಿಯರು.
ಅನುರಾಧಾ ಅವರ ತಂದೆ ಚಿತ್ರಕಲಾ ನಿಪುಣ ಮತ್ತು ಸಂಗೀತ ವಿದ್ವಾನ್ ರಾ. ಸೀತಾರಾಂ ಅವರು ಸಂಗೀತ, ಚಿತ್ರಕಲೆ, ವೀಣಾ ವಾದನ ಇವೆಲ್ಲವುಗಳಲ್ಲೂ ಮಹಾನ್ ಹೆಸರಾಗಿದ್ದರು. ಅನುರಾಧಾ ಅವರು ತಮ್ಮ ಮಹಾನ್ ಕುಟುಂಬದ ಈ ಎಲ್ಲ ಆಸಕ್ತಿಗಳನ್ನೂ ಪೋಷಿಸಿಕೊಂಡು ಬಂದವರು. ಸಂಗೀತ ಪ್ರಸ್ತುತಿ ಮತ್ತು ಬೋಧನೆಗಳಲ್ಲದೆ ಅವರು ಹಿಂದೀ ಚಿತ್ರಗೀತೆಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಿದ್ದರು ಎಂಬುದು ಅವರ ಆಪ್ತರ ಮಾತು. ಕಾಲೇಜಿನಲ್ಲಿ ಗಣಿತದ ಬೋಧಕಿಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಇವರ ಪತಿ ಆನಂದ್ ಅವರು ಸೈನ್ಯದಲ್ಲಿ ಅಧಿಕಾರಿಗಳಾಗಿ ದೇಶಸೇವೆ ಮಾಡಿದವರು. ಅನುರಾಧಾ ಅವರು ತಮ್ಮ ತಂದೆ ರಾ. ಸೀತಾರಾಂ ಅವರ ಸಂಸ್ಮರಣೆಯಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದಾರೆ.
ಹಿರಿಯರಾದ ಅನುರಾಧಾ ಅಂತಹ ಹಿರಿಯರ ಸ್ನೇಹ ವಲಯದಲ್ಲಿರುವುದು ನಮ್ಮ ಸೌಭಾಗ್ಯ. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ. 🌷🙏🌷
Happy birthday Anuradha Anand Amma🌷🙏🌷

ಕಾಮೆಂಟ್‌ಗಳು