ಜಿತೂರಿ
ರಂಗ ಭೂಮಿ, ಕಿರುತೆರೆ, ಹಾಗೂ ಚಲನಚಿತ್ರ ಕಲಾವಿದ ವಿಜಯಕುಮಾರ್ ಜಿತೂರಿ 2026ರ ಆಗಸ್ಟ್ 11ರಂದು ನಿಧನರಾದರು.
ಜಿತೂರಿ ಅವರದ್ದು ನಾಲ್ಕು ದಶಕದ ಸುದೀರ್ಘ ರಂಗಪಯಣವಾಗಿತ್ತು. ಪ್ರಸಿದ್ಧ ನಿರ್ದೇಶಕುರುಗಳಾದ ಸಿ. ಜಿ. ಕೆ, ಶಂಕರ್ ನಾಗ್, ಸುರೇಶ ಆನಗಳ್ಳಿ,, ಸಿ. ಬಸವಲಿಂಗಯ್ಯ, ಬಿ. ಸುರೇಶ, @ಆರ್. ನಾಗೇಶ್. ಕೆ. ವಿ. ನಾಗರಾಜ ಮೂರ್ತಿ, ಶ್ರೀನಿವಾಸ್ ಪ್ರಭು, ಕೃಷ್ಣಮೂರ್ತಿ ಕವತ್ತಾರ್, ಸಶಿಧರ್ ಭಾರೀಘಾಟ್ ಮುಂತಾದವರ ನಾಟಕಗಳಲ್ಲಿ ಅಭಿನಯಿಸಿದ್ದರು.
ಮಂಟೇಸ್ವಾಮಿ ಕಥಾಪ್ರಸಂಗ ನಾಟಕದಲ್ಲಿ 350ಕ್ಕೂ ಹೆಚ್ಚಿನ ಪ್ರದರ್ಶನಗಳಲ್ಲಿ ಜಿತೂರಿ ಅಭಿನಯಿಸಿದ್ದರು .ಸಂತೆಯಲ್ಲಿ ನಿಂತ ಕಬಿರ, ಮಲ್ಲಮ್ಮನ ಮನೆ ಹೊಟ್ಲು, ಸ್ಮಶಾನ ಕುರುಕ್ಷೇತ್ರ, ಮೌನಿ, ಯಮಳ ಪ್ರಶ್ನೆ, ಶಿವರಾತ್ರಿ, ಮೋಳಿಗೆ ಮಾರಯ್ಯ, ಹೀಗೆ ಅವರು ಅಭಿನಯಿಸಿದ ನಾಟಕಗಳು ನೂರಾರು. ಅವರು ಕಿರುತೆರೆ ಕಲಾವಿದರಾಗಿ 20ಕ್ಕೂ ಹೆಚ್ಚು ಮೆಗಾ ಧಾರವಾಹಿಗಳಲ್ಲಿ ಅಭಿನಯಿಸಿದ್ದರು.
ಜಿತೂರಿ ಅವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಸೇರಿದಂತೆ ಹತ್ತಾರು ಪ್ರಶಸ್ತಿ ಪುಸ್ಕಾರಗಳಿಗೆ ಭಾಜಾನರಾಗಿದ್ದರು.
ಅಗಲಿದ ಕಲಾಚೇತನಕ್ಕೆ ನಮ್ರ ನಮನ🌷🙏🌷
Respects to departed soul Vijayakumar Jituri 🌷🙏🌷

ಕಾಮೆಂಟ್‌ಗಳು