ಬುಧವಾರ, ಸೆಪ್ಟೆಂಬರ್ 4, 2013

ಏನು ಧನ್ಯಳೋ ಲಕುಮಿ


ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೊ 

ಸಾನುರಾಗದಿಂದ ಹರಿಯ
ತಾನೇ ಸೇವೆ ಮಾಡುತಿಹಳು

ಕೋಟಿಕೋಟಿ ಭೃತ್ಯರಿರಲು 
ಹಾಟಕಾಂಬರನ ಸೇವೆ 
ಸಾಟಿಯಿಲ್ಲದೆ ಮಾಡಿ ಪೂರ್ಣ 
ನೋಟದಿಂದ ಸುಖಿಸುತಿಹಳು

ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು
ಚಿತ್ರಚರಿತನಾದ ಹರಿಯ
ನಿತ್ಯ ಸೇವೆ ಮಾಡುತಿಹಳು

ಸರ್ವತ್ರದಿ ವ್ಯಾಪ್ತನಾದ
ಸರ್ವ ದೋಷರಹಿತನಾದ
ಸರ್ವವಂದ್ಯನಾದ ಪುರಂದರ
ವಿಠ್ಠಲನ್ನ ಸೇವಿಸುವಳು

ಸಾಹಿತ್ಯ: ಪುರಂದರದಾಸರು


Tag: Enu dhanyalo lakuumi

ಕಾಮೆಂಟ್‌ಗಳಿಲ್ಲ: