ಶುಕ್ರವಾರ, ಸೆಪ್ಟೆಂಬರ್ 6, 2013

ನಮ್ಮೂರೆ ಚಂದ ನಮ್ಮವರೆ ಅಂದ

ದೇಶ ದೇಶವ ತಿರುಗಿ
ಪರದೇಶಿಯಾಗಿ ಪರಿತಪಿಸಿದೆನೊ
ಪುರಂದರ ವಿಠಲ
ಭಾಷೆ ಸಾವಿರ ಕಲಿತು
ಮೂತಿ ಹೊಡೆದರೋ
ಕಾದು ಕಾಣದೆ ಹೋದೆ
ಕೂಡಲ ಸಂಗಮ ದೇವ
ಲೇಸಾದ ನಡೆ ನುಡಿಯ
ಜನರ ಕಾಣದೆ
ಬಲು ಹೇಸಿ ಹಿಂತುರಿಗಿದೆನೊ
ಹರ ಹರ ಶ್ರೀ ಚೆನ್ನ ಸೋಮೇಶ್ವರ
ದೇಶಾದ ಊರೆ ನಮ್ಮೂರು
ಇದಕೆಲ್ಲು ಸಾಟಿ ಕಾಣೇ...
ನೀನೊಲಿದು ಕಾಪಾಡು ಶ್ರೀ ಗೋಮಟೇಶ್ವರ

ನಮ್ಮೂರೆ ಚಂದ
ನಮ್ಮವರೆ ಅಂದ
ಕನ್ನಡ ಭಾಷೆ ಕರ್ಣಾನಂದ
ಉನ್ನತ ಕೀರ್ತಿಗೆ ತೌರೂರಾದ
ಕನ್ನಡ ನಾಡಿನ ಇತಿಹಾಸ ಚಂದ
ಕನ್ನಡ ನಾಡಿನ ಇತಿಹಾಸ ಚಂದ
ನಮ್ಮೂರೆ ಚಂದ
ನಮ್ಮವರೆ ಅಂದ
ಕನ್ನಡ ಭಾಷೆ ಕರ್ಣಾನಂದ

ಮೈಸೂರು ರಾಯ್ಚೂರು
ಬೆಂಗ್ಳೂರು ಮಂಗ್ಳೂರು
ಧಾರ್ವಾರ ಕಾರ್ವಾರ ಬಳ್ಳಾರಿ ಬೇಲೂರು
ಬಿಜಾಪುರ ಕಲ್ಬುರ್ಗಿ ಸಿದ್ಧಾಪುರವೂ
ಬಿಜ್ಜಳ ಹೊಯ್ಸಳ ಒಡೆಯರ ರಾಜ್ಯವು
ಎಲ್ಲಾ ಕನ್ನಡ ತಾಯಿಯ ಕುಲವು
ಎಲ್ಲೆಲ್ಲೂ ಹಾರಲು ಕೀರ್ತಿಯ ಗೆಲುವು
ನಮ್ಮೂರೆ ಚಂದ
ನಮ್ಮವರೆ ಅಂದ
ಕನ್ನಡ ಭಾಷೆ ಕರ್ಣಾನಂದ

ಶಂಕರ ಮಾಧವ ರಾಮಾನುಜರು
ಬಸವಣ್ಣ ಮತ್ತೆ ತೀರ್ಥಂಕರರು
ಜಕಣಾಚಾರಿ ದುರ್ಗದ ಓಬ್ಬವ
ಸಂಚಿಕೆ ಹೊನ್ನಮ್ಮ
ಕಿತ್ತೂರು ಚೆನ್ನಮ್ಮ
ಪಂಪ ರನ್ನ ಮೊದಲಾದವರೆಲ್ಲ
ಮೆರೆದಂತ ನಾಡಿದು ಸಾಮಾನ್ಯವಲ್ಲ
ನಮ್ಮೂರೆ ಚಂದ
ನಮ್ಮವರೆ ಅಂದ
ಕನ್ನಡ ಭಾಷೆ ಕರ್ಣಾನಂದ

ಕನ್ನಡ ಸಾಹಿತ್ಯ ಸಂಗೀತ ಚಂದ
ಕನ್ನಡ ಹೆಣ್ಣಿನ ನಡೆ ನುಡಿ ಚಂದ
ಕನ್ನಡ ಎಂಬುವ ಮಾತೇ ಚಂದ
ಕನ್ನಡಿಗರ ಕಲೆಯೆ ಪರಮಾನಂದ
ಚಂದ ಚಂದ ಎಲ್ಲವು ಚಂದ
ನೀ ಕೇಳು ಮುದ್ದಿನ ಕನ್ನಡ ಕಂದ
ನಮ್ಮೂರೆ ಚಂದ
ನಮ್ಮವರೆ ಅಂದ
ಕನ್ನಡ ಭಾಷೆ ಕರ್ಣಾನಂದ
ಉನ್ನತ ಕೀರ್ತಿಗೆ ತೌರೂರಾದ
ಕನ್ನಡ ನಾಡಿನ ಇತಿಹಾಸ ಚಂದ

ಚಿತ್ರ: ಮುತ್ತೈದೆಭಾಗ್ಯ
ಸಾಹಿತ್ಯ: ಗೌತಮ
ಸಂಗೀತ: ರಾಜನ್ ನಾಗೇಂದ್ರ
ಗಾಯಕ: ನಾಗೇಂದ್ರ
Tag: Nammoore chanda, nammavare anda, kannada bhaashe karnaananda

ಕಾಮೆಂಟ್‌ಗಳಿಲ್ಲ: