ಮಂಗಳವಾರ, ಸೆಪ್ಟೆಂಬರ್ 3, 2013

ಎದೆಯು ಮರಳಿ ತೊಳಲುತಿದೆ


ಎದೆಯು ಮರಳಿ ತೊಳಲುತಿದೆ
ದೊರೆಯದುದನೆ ಹುಡುಕುತಿದೆ
ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ
ತನ್ನ ಕುಡಿಯನು

ಸಿಗಲಾರದಾಸರಕೆ
ಕಾದ ಕಾವ ಬೇಸರಕೆ
ಮಿಡುಕಿ ದುಡುಕಲೆಣಿಸುತಿದೆ
ತನ್ನ ಗಡಿಯನು

ಅದಕೂ ಇದಕೂ ಅoಗಲಾಚಿ
ತನ್ನೊಲವಿಗೆ ತಾನೇ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚಿ
ಮುರುಟತಲಿದೆ ಮನದಲಿ

ನೀರದಗಳ ದೂರ ತೀರ
ಕರೆಯುತಲಿದೆ ಎದೆಯ ನೀರ
ಮೀರುತದಲಿ ಹೃದಯ ಭಾರ
ತಾಳಲೆoತು ನಾ
ಯಾವ ಬಲವೊ ಯಾವ ಒಲವೊ
ಕಾಯಬೇಕು ಅದರ ಹೊಳವು
ಕಾಣದೆದಳ್ಳಿಸಲು ಮನವು
ಬಾಳಲೆoತು ನಾ

ಎದೆಯು ಮರಳಿ ತೊಳಲುತಿದೆ
ದೊರೆಯದುದನೆ ಹುಡುಕುತಿದೆ
ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ
ತನ್ನ ಕುಡಿಯನು

ಸಾಹಿತ್ಯ: ಡಾ. ಎಂ. ಗೋಪಾಲಕೃಷ್ಣ ಅಡಿಗ


Tag: Edeyu Marali Tolalutide

ಕಾಮೆಂಟ್‌ಗಳಿಲ್ಲ: