ಗುರುವಾರ, ಸೆಪ್ಟೆಂಬರ್ 19, 2013

ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ

ಇಂದು ಕೆಂದಾವರೆಯ ದಳ
ದಳಿಸಿ ದಾರಿಯಲಿ ಗಂಧದೌತಣ
ಹೋಗಿ ಬರುವ ಜನಕೆ
ಮಂದ ಮಾರುತವಿರಲಿ ಮರಿ
ದುಂಬಿ ಇರಲಿ ಆನಂದವಿರೆ
ಅತಿಥಿಗಳ ಕರೆಯಬೇಕೆ

ನಗುತಲಿರೆ ನೀರು ಹೊಂಬಿಸಿಲು
ಕಚಗುಳಿ ಇಡಲು
ದುಂಬಿಗಳು ಒಲವನೆ ಗುಂಜಿಸಿರಲು
ನಾಚಿ ತಲೆ ಬಾಗಿಸಿತು ಕಮಲ
ದೂರದ ಬಾನದಾರಿಯಲಿ
ಸಪ್ತಾಷ್ವವೇರಿ ಬಹನು

ತನ್ನ ಕೈ ಕೈಯೊಳು
ಒಲವು ಬಲೆಗಳನಿಟ್ಟು
ನೀರಿನಾಳದೊಲವನು ಬಿಂಬಿಸುವನು
ಮೈ ಮರೆತುದಾ ಪದ್ಮ
ಪರಮೇಗಳಾ ಪರಿವಾರ
ಮಂಜಾಗಿ ಕರಗಿತ್ತು ಸುತ್ತ ಮುತ್ತ

ಇರುವ ದುಂಬಿಯ ಬಿಟ್ಟು
ಬರುವ ನೇಸರ ಕರೆಗೆ
ಓಗುಟ್ಟುದೆನ್ನ ಕೆಂದಾವರೆ
ಬರುವ ಬಾಳಿನ ಕನಸು
ರವಿಯಾಗಿ ಬಹುದೇನು
ಕಾಯಬೇಕು ಅದಕೆ ಎಲ್ಲಿವರೆಗೆ


ಸಾಹಿತ್ಯ:  ಎಂ.ಗೋಪಾಲಕೃಷ್ಣ ಅಡಿಗ


Tag: Indu Kendavareya Dala Dalisi Daariyali

ಕಾಮೆಂಟ್‌ಗಳಿಲ್ಲ: