ಸೂರ್ಯವಂದನ
ಸೂರ್ಯವಂದನ
"ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ
ತತ್
ತ್ವಂ ಪೂಷನ್,
ಆಪಾವೃಣು ಸತ್ಯಧರ್ಮಾಯ
ದೃಷ್ಟಯೇ"
"ಪಾತ್ರೆಯನ್ನು ಮುಚ್ಚಳದಿಂದ
ಮುಚ್ಚುವಂತೆ, ನಿನ್ನ ಚಿನ್ಮಯವಾದ ಆವರಣವು ಸತ್ಯದ ಬಾಗಿಲನ್ನು
ಮುಚ್ಚಿದೆ. ಓ ಕರುಣಾಳು ಸೂರ್ಯ ದೇವನೇ,
ಆ ಬಾಗಿಲನ್ನು ಸರಿಸಿ ನಿನ್ನ ದಿವ್ಯಜ್ಞಾನದರ್ಶನವನ್ನು ನಮಗೆ ಕೃಪೆ ಮಾಡು”
ಓಂ ಮಿತ್ರಾಯ ನಮಃ - ಎಲ್ಲ
,ಜೀವಿಗಳ ಸ್ನೇಹಿತನಿಗೆ ನಮಸ್ಕಾರಗಳು
ಓಂ ರವಯೇ ನಮಃ -
ಹೊಳೆಯುತ್ತಿರುವವನಿಗೆ ನಮಸ್ಕಾರಗಳು
ಓಂ ಸೂರ್ಯಾಯ ನಮಃ –
ಚೇತನ ನೀಡುವವನಿಗೆ ನಮಸ್ಕಾರಗಳು
ಓಂ ಭಾನವೇ ನಮಃ - ಎಲ್ಲವನ್ನು
ಪ್ರಕಾಶಿಸುವವನಿಗೆ ನಮಸ್ಕಾರಗಳು
ಓಂ ಖಗಾಯ ನಮಃ –
ಆಕಾಶದಲ್ಲಿ ತ್ವರಿತವಾಗಿ ಸಂಚರಿಸುವವನಿಗೆ ನಮಸ್ಕಾರಗಳು
ಓಂ ಪೂಷ್ಣೇ ನಮಃ - ಶಕ್ತಿಯನ್ನು
ಕೊಡುವವನಿಗೆ ನಮಸ್ಕಾರಗಳು
ಓಂ ಹಿರಣ್ಯಗರ್ಭಾಯ ನಮಃ - ಸುವರ್ಣ
ವಿಶ್ವಾತ್ಮನಿಗೆ ನಮಸ್ಕಾರಗಳು
ಓಂ ಮರೀಚಯೇ ನಮಃ - ಬೆಳಗಿನ ದೇವತೆಗೆ
ನಮಸ್ಕಾರಗಳು
ಓಂ ಆದಿತ್ಯಾಯ ನಮಃ - ಅದಿತಿಯ ಮಗ - ವಿಶ್ವಮಾತೆಯ ಮಗನಿಗೆ
ನಮಸ್ಕಾರಗಳು
ಓಂ ಸವಿತ್ರೆ ನಮಃ - ಸೃಷ್ಟಿ ಕರ್ತನಿಗೆ
ನಮಸ್ಕಾರಗಳು
ಓಂ ಅರ್ಕಾಯ ನಮಃ - ಸ್ತುತಿಗೆ
ಅರ್ಹನಾದವನಿಗೆ ನಮಸ್ಕಾರಗಳು
ಓಂ ಭಾಸ್ಕರಾಯ ನಮಃ - ಜ್ಞಾನದ ಕಡೆಗೆ
ನಮ್ಮನ್ನು ನಡೆಸುವವನಿಗೆ ನಮಸ್ಕಾರಗಳು
ಕಾಮೆಂಟ್‌ಗಳು