ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ
ಪಾಲಿಸೆ
ಎನ್ನ ಶ್ರೀಮಹಾಲಕ್ಷ್ಮಿ
ಪಾಲಿಸೆ
ಎನ್ನನು ಪಾಲಾಬ್ಧಿ ಸಂಜಾತೆ
ಲಲಿತಾಂಗಿ
ಶುಭೆ ದೇವಿ ಮಂಗಳೆ ದೇವಿ
ವೇದಾಭಿಮಾನಿ
ಸಾರಸಾಕ್ಷಿ ಶ್ರೀಧರ ರಮಣಿ
ಕಾದುಕೋ
ನಿನ್ನಯ ಪಾದ ಸೇವಕರನ್ನು
ಆದಿಶಕ್ತಿ
ಸರ್ವಾಧಾರೆ ಗುಣಪೂರ್ಣೆ
ದಯದಿಂದ
ನೋಡೆ ಭಜಿಪ ಭಕ್ತರ ಭಯ ದೂರ ಮಾಡೆ
ದಯ
ಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ
ಜಯದೇವಿ
ಸುವ್ರತೆ ಹಯವದನನ ಪ್ರೀತೆ
ನೀನಲ್ಲದನ್ಯ
ರಕ್ಷಿಪರನ್ನು ಕಾಣೆ ನಾ ಮುನ್ನ
ದಾನವಾಂತಕ
ಸಿರಿಪುರಂದರವಿಠಲನ
ಧ್ಯಾನಿಪ
ಭಕುತರ ಮಾನ ನಿನ್ನದು ತಾಯೆ
ಸಾಹಿತ್ಯ: ಪುರಂದರದಾಸರು
Tag: Palise enna sri mahalakshmi
ಕಾಮೆಂಟ್‌ಗಳು