ಬುಧವಾರ, ಅಕ್ಟೋಬರ್ 9, 2013

ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ

ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ

ಪಚ್ಚೆ ಕಾಡಿನ ನಡುವೆ, ಸ್ವಚ್ಛ ಪ್ರೀತಿಯ ಧಾರೆ
ಪಚ್ಚೆ ಕಾಡಿನ ನಡುವೆ, ಸ್ವಚ್ಛ ಪ್ರೀತಿಯ ಧಾರೆ
ಸಂಗೀತ ಹಾಡುತ ಬಂದ ಬೆರಗು
ಜಾರು ಜಲಪಾತ, ವಿಧವಿಧ ಅವತಾರ
ಹಸಿರು ಈ ವನ ತಾಯ್ಗೆ ಚೆಂದ ಸೆರಗು
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ

ಮಣ್ಣು ಗಂಧವ ಹರಡಿ, ಮೌನ ಹಂದರ ಹಾಸಿ
ಮಣ್ಣು ಗಂಧವ ಹರಡಿ, ಮೌನ ಹಂದರ ಹಾಸಿ
ಈ ಕಾಡು ತಾನಾಗಿ ತಂದ ನಿಧಿಯು
ಮಾತು ತಿಳಿದಾತ ಮರಗಿಡ ಕೊಂದಾಗ
ವನದ ಮೌನಕೆ ತಾಳ್ಮೆ ಎಲ್ಲಿಯವರೆಗು
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ
ಕಾಯುವ ತಾಯೆ, ಕಾಯುವ ತಾಯೆ.

ಚಿತ್ರ: ಕಾಡಿನ ಬೆಂಕಿ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಬಿ.ಆರ್.ಛಾಯ
ಕಾಮೆಂಟ್‌ಗಳಿಲ್ಲ: