ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
ನವರಾತ್ರಿ ಸಂಜೆಯಲಿ, ನನ್ನೆದೆಯ ಹಾಡಿನಲಿ
ಪ್ರಶ್ನೆಯೊಂದು ಮೂಡಿಹುದು ನೋಡಮ್ಮ!
ನವರಾತ್ರಿ ಸಂಜೆಯಲಿ ನಾನುಡಿವ ಮಾತಿನಲಿ
ಉತ್ತರವು ಅಡಗಿಹುದೂ ಕೇಳಮ್ಮಾ...
ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ.
ಅವನ ಮಧುರ ಮುರಳಿಯು
ಮಿಡಿವ ಕರೆಯ ರವಳಿಯೂ
ಆಜೊತೆಗಾಗೇ ಕುಲಸತಿಗಾಗಿ.
ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
ಇಬ್ಬರಿಗಾಗಿ ಎಂದೂ ಇಬ್ಬರಿಗಾಗಿ
ಮೊದಲು ಸತ್ಯಭಾಮೆ ರುಕ್ಮಿಣಿಯರು ಇಬ್ಬರೂ
ಒಬ್ಬನಿಗಾಗಿ ಅವನೊಬ್ಬನಿಗಾಗಿ
ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ.
ತನ್ನ ಪೂಜೆಗೈದ ತಿಳಿದು ತಪದೀ ಮೆಚ್ಚಿದ
ತಿದ್ದಿ ಒಲಿದು ಮನಸು ತಂದು ಹರನೂ ವರಿಸಿದ
ಪ್ರೀತಿ ಎಂಬ ಬಂಧ ಗಂಗೆ ಅಂದ ಮೆಚ್ಚಿದ
ತನ್ನ ಶಿರದ ಮೇಲೆ ಅವಳ ಹರನೂ ಇರಿಸಿದ
ಒಂದೇ ನಾಳೆ ಒಂದೇ ಮದುವೆ ಬಾಳಿಗೆ ಅದೇ ನೀತಿ
ಒಂದೇ ನಾಳೆ ಇಬ್ಬರಿಗೂ ಅದೇ ದೇವನ ನಿಜ ರೀತಿ
ಅದು ಅಂದಿನ ಕತೆಯಮ್ಮಾ
ಇದು ನಿತ್ಯದ ಕತೆಯಮ್ಮಾ
ಅದು ಬೊಂಬೆ ಮದುವೆಯಮ್ಮಾ
ಇದು ಸತ್ಯದ ಮದುವೆಯಮ್ಮಾ
ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ.
ಮಲ್ಲೀ ಹೂವ ನನ್ನೀ ಮುಡಿಗೆ ಇಟ್ಟ ನಲ್ಲನು
ಎಂದೂ ಅವಳ ಬಿಟ್ಟೂ, ನೋಡ ಬೇರೇ ಯಾರನೂ
ನಲ್ಲನೆಟ್ಟ ಪ್ರೀತಿ ಬಳ್ಳಿ ಎರಡೂ ತೋಟದೀ
ಎರಡೂ ಬಳ್ಳಿ ತನ್ನಾ ಹೂವ ಎಲ್ಲಾ ಅವನದೇ
ಒಂದೇ ಒಡಲ ಎರಡೂ ಪ್ರಾಣ ಒಟ್ಟಿಗೆ ಇರಬಹುದೇ?
ಒಂದೇ ಮುಖಕೆ ಎರಡೂ ಕಣ್ಣು ಸೃಷ್ಟಿಯ ತಪ್ಪಹುದೇ?
ಇದಕ್ಕುತ್ತರ ಏನಿದೆಯೋ?
ಕಂಬನಿಗೆ ಕೊನೆಯಿದೆಯೋ?
ಇದು ವಿಧಿಯ ಚೆಲ್ಲಾಟ!
ಇದು ಬಾಳಿನ ಹೋರಾಟ!
ನೀಲ ಮೇಘಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗಿ, ಈ ರುಕ್ಮಿಣಿಗಾಗಿ.
ಚಿತ್ರ: ಎರಡು ರೇಖೆಗಳು
ಸಾಹಿತ್ಯ:
ಆರ್. ಎನ್. ಜಯಗೋಪಾಲ್
ಸಂಗೀತ: ಎಂ. ಎಸ್. ವಿಶ್ವನಾಥನ್
ಗಾಯನ: ಪಿ. ಸುಶೀಲ ಮತ್ತು ವಾಣಿ ಜಯರಾಂ
ಕಾಮೆಂಟ್‌ಗಳು