ಗುರುವಾರ, ಜನವರಿ 23, 2014

ನೇತಾಜಿ


ಭಾರತ ಮಾತೆಯ ಬಸಿರಲಿ ಬಂದನು

ಹಿರಿಮೆಯ ಹಿರಿಮಗ ನೇತಾಜಿ
ದೇಶದ ಬಂಧನ ಕಳಚಲು ಹೆಣಗಿದ
ಸ್ವಾತಂತ್ರ್ಯಪ್ರಿಯ ನೇತಾಜಿ


ಬಿಳಲಿಯರ ಗುಂಡಿಗೆ ಬೆದರದ ಗಂಡೆದೆ

ತೋರಿದ ಗಟ್ಟಿಗ ನೇತಾಜಿ
ಪ್ರತಿ ಸರಕಾರವ ರಚಿಸುವ ಪೌರುಷ
ಮೆರೆದ ಪುರೂರವ ನೇತಾಜಿ


ಭಾರತ ರಾಷ್ಟ್ರದ ಸೇನೆಯ ಕಟ್ಟಿದ

ಶಿಸ್ತಿನ ಸೈನಿಕ ನೇತಾಜಿ
ಜೈ ಹಿಂದ್‌ಗೀತವ ಮೊದಲಿಗೆ ಹಾಡಿದ
ಗಾಯಕ ಮುಖ್ಯನು ನೇತಾಜಿ


ದೇಶದ ಒಳಿತಿಗೆ ದೇಹವ ಸವೆಸಿದ

ಜನತೆಯ ಸೇವಕ ನೇತಾಜಿ
ಕ್ಷತ್ರಿಯ ಧೈರ್ಯದ ಸಿಂಹದ ಶೌರ್ಯದ
ಸಾಹಸಿ ನಾಯಕ ನೇತಾಜಿ


ಸಾಹಿತ್ಯ: ಪಳಕಳ ಸೀತಾರಾಮಭಟ್ಟ

Tag: Netaji

ಕಾಮೆಂಟ್‌ಗಳಿಲ್ಲ: