ನಾನೇ ಎಂಬ ಭಾವ ನಾಶವಾಯಿತು
ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ
ಗಾಳಿಯ ಪಟದಂತೆ ನಾನಯ್ಯ
ಆಡಿಸೋ ಸೂತ್ರಧಾರೀ ನೀನಯ್ಯ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೇಳಿದ ನೀತಿಯ ಕೇಳದೆ ಹೋದೆ
ಕೇಳಿ ನಡೆಯದೆ ಅವಿವೇಕಿಯಾದೆ
ಎಲ್ಲವು ನಾನು, ನನ್ನದೇ ಎಂದು
ನಂಬಿದೆನಯ್ಯೋ ಶಾಶ್ವತವೆಂದು
ಎಲ್ಲಾ ಸುಳ್ಳು, ಎಲ್ಲವು ಪೊಳ್ಳು
ತಿಳಿದೆನು ಇಂದು, ನಾನು ಮಿಥ್ಯ ನೀನು
ಸತ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೆಂಡತಿ ಮಕ್ಕಳು ಬಂಧು ಬಳಗ
ರಾಗ ಭೋಗಗಳ ವೈಭೋಗ
ಕಾಲನು ಬಂದು, ಬಾ ಎಂದಾಗ
ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲ ಶೂನ್ಯ, ಎಲ್ಲವು ಶೂನ್ಯ
ಉಳಿಯುವುದೊಂದೆ, ದಾನ ಧರ್ಮ ತಂದ ಪುಣ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಹೇ ಕೃಷ್ಣಾ, ಹೇ ಕೃಷ್ಣಾ
ಚಿತ್ರ: ದೇವರ ದುಡ್ಡು
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಪಿ.ಬಿ.ಶ್ರೀನಿವಾಸ್
Tag: Naane emba bhava naashavayitu, olagina kannanu teresideyo
ಈ ಹಾಡು ಯಾವ ರಾಗದಲ್ಲಿದೆ.?
ಈ ಹಾಡು ಯಾವ ರಾಗದಲ್ಲಿದೆ.?
Good song..