ಬುಧವಾರ, ಫೆಬ್ರವರಿ 26, 2014

ಶಿವಪ್ಪ ಕಾಯೋ ತಂದೆ

ಶರಣು ಶಂಕರ ಶಂಭೋ
ಓಂಕಾರನಾದ ರೂಪಾ

ಮೊರೆಯ ನೀ ಆಲಿಸೀ
ಪಾಲಿಸೋ ಸರ್ವೇಶಾ


ಶಿವಪ್ಪ ಕಾಯೋ ತಂದೆ
ಮೂರುಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ
ಕಾಪಾಡಯ್ಯಾ ಹರನೇ ಕಾಪಾಡಯ್ಯಾ

ಭಕ್ತಿಯಂತೆ ಪೂಜೆಯಂತೆ

ಒಂದೂ ಅರಿಯೆ ನಾ

ಪಾಪವಂತೆ ಪುಣ್ಯವಂತೆ

ಕಾಣೆನಯ್ಯ ನಾ
ಪಾಪವಂತೆ ಪುಣ್ಯವಂತೆ
ಕಾಣೇನಯ್ಯ ನಾs.....
ಶಿವಪ್ಪ ಕಾಯೋ ತಂದೆ

ಮೂರುಲೋಕ ಸ್ವಾಮಿ ದೇವಾ

ಹಸಿವೆಯನ್ನು ತಾಳಲಾರೆ

ಕಾಪಾಡಯ್ಯಾ.ಶುದ್ಧನಾಗಿ ಪೂಜೆಗೈಯೇ
ಒಲಿವೆಯಂತೆ ನೀ

ಶುದ್ಧವೋ ಅಶುದ್ಧವೋ

ನಾ ಕಾಣೆ ದೇವನೇ

ನಾದವಂತೆ ವೇದವಂತೆ

ಒಂದು ತಿಳಿಯೇ ನಾ
ಬೆಂದ ಜೀವ ನೊಂದು
ಕೂಗೆ ಬಂದು ನೋಡೆಯಾ
ಬೆಂದ ಜೀವ ನೊಂದು
ಕೂಗೆ ಬಂದು ನೋಡೆಯಾ ಹರನೇ

ಶಿವಪ್ಪ ಕಾಯೋ ತಂದೆ
ಮೂರುಲೋಕ ಸ್ವಾಮಿ ದೇವಾ

ಹಸಿವೆಯನ್ನು ತಾಳಲಾರೆ

ಕಾಪಾಡಯ್ಯಾ

ಏಕಚಿತ್ತದಿ ನಂಬಿದವರನೀ
ಸಾಕಿ ಸಲಹುವೆ ಎಂತಪ್ಪಾ

ಶೋಕವ ಹರಿಸುವ
ದೇವ ನೀನಾದರೆ
ಬೇಟೆಯ ತೋರೋ ಎನ್ನಪ್ಪಾ
ಲೋಕವನಾಳುವ ನೀನಪ್ಪಾ

ಬೇಟೆಯ ತೋರೋ ಎನ್ನಪ್ಪಾ
ಬೇಟೆಯ ತೋರೋ ಎನ್ನಪ್ಪಾ
ಬೇಟೆಯ ತೋರೋ ಎನ್ನಪ್ಪಾ
ಬೇಟೆಯ ತೋರೋ ಎನ್ನಪ್ಪಾ

ಚಿತ್ರ: ಬೇಡರ ಕಣ್ಣಪ್ಪ

ರಚನೆ: ಎಸ್. ನಂಜಪ್ಪ
ಸಂಗೀತ: ಆರ್. ಸುದರ್ಶನಂ
ಗಾಯನ : ಶ್ರೀ ಸಿ ಎಸ್ ಜಯರಾಮನ್ Tag: Shivappa Kaayo Thande

ಕಾಮೆಂಟ್‌ಗಳಿಲ್ಲ: