ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೂವೂ ಚೆಲುವೆಲ್ಲಾ ನಂದೆಂದಿತೂ

ಹೂವೂ ಚೆಲುವೆಲ್ಲಾ ನಂದೆಂದಿತೂ
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತೂ

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು
ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು
ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆಂದಿತು
ಹೂವೂ ಚೆಲುವೆಲ್ಲಾ ನಂದೆಂದಿತೂ

ನವಿಲೊಂದು ನಾಟ್ಯದಲ್ಲಿ ನಾನೇ ಮೊದಲೆಂದಿತು
ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು
ಹೆಣ್ಣು ನಾಟ್ಯದರಸಿ ಪಾರ್ವತಿಯೆ ಹೆಣ್ಣೆಂದಿತು
ಹೂವೂ ಚೆಲುವೆಲ್ಲಾ ನಂದೆಂದಿತೂ

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು
ನೀಡುವೆ ಮಳೆ ತೊಳೆಯುವೆ ಕೊಳೆ ಸಮನಾರೆನಗೆಂತು
ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆಂದಿತು
ಹೂವೂ ಚೆಲುವೆಲ್ಲಾ ನಂದೆಂದಿತೂ
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು
ಹೂವೂ ಚೆಲುವೆಲ್ಲಾ ನಂದೆಂದಿತೂ


ಚಿತ್ರ: ಹಣ್ಣೆಲೆ ಚಿಗುರಿದಾಗ
ಸಾಹಿತ್ಯ: ಅರ್.ಎನ್.ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯನ: ಪಿ.ಸುಶೀಲ

Tag: Hoovoo cheluvella nandenditu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ