ಮಂಗಳವಾರ, ಫೆಬ್ರವರಿ 4, 2014

ಸತ್ಯಾ ನಾಡೆಲ್ಲಾ

ಮೈಕ್ರೋಸಾಫ್ಟ್ ಸಂಸ್ಥೆಗೆ ಭಾರತೀಯ ಮುಖ್ಯಸ್ಥ

ವಿಶ್ವಪ್ರಸಿದ್ಧ ಮೈಕ್ರೋಸಾಫ್ಟ್ ಸಂಸ್ಥೆಗೆ ಇದೀಗ ಭಾರತೀಯರಾದ ಹೈದರಾಬಾದ್ ಪ್ರಾಂತ್ಯಕ್ಕೆ ಸೇರಿದವರಾದ ಸತ್ಯಾ ನಾಡೆಲ್ಲಾ ಅವರು ಚೀಫ್ ಎಕ್ಸಿಕ್ಯೂಟಿವ್ ಆಗಿ ನೇಮಕಗೊಂಡಿದ್ದಾರೆ.  "ಕುತುಹಲ ಮತ್ತು ಕಲಿಕೆಗಾಗಿನ ಬಾಯಾರಿಕೆಗಳು ನನ್ನನ್ನು ನಿರೂಪಿಸಿವೆ" ಎಂದು ತಮ್ಮ ಕುರಿತು ಹೇಳುವ ಸತ್ಯಾ ನಾಡೆಲ್ಲಾ "ತಂತ್ರಜ್ಞಾನದ ಸದ್ಬಳಕೆಯ ಮೂಲಕ ವಿಶ್ವದಲ್ಲಿ ಅಪೂರವವಾದದನ್ನು ಸಾಧಿಸಬಹುದು ಎಂಬ ನಂಬಿಕೆ ಉಳ್ಳವರಾಗಿದ್ದಾರೆ.

ಬಿಲ್ ಗೇಟ್ಸ್ ಅಂತಹ ಅಪ್ರತಿಮ ಪ್ರತಿಭಾವಂತರು ಬೆಳೆಸಿದ ಮೈಕ್ರೋಸಾಫ್ಟ್ ಸಂಸ್ಥೆಗೆ ಭಾರತೀಯ ಪ್ರತಿಭಾವಂತರೊಬ್ಬರು ನೇತೃತ್ವ ವಹಿಸುತ್ತಿರುವುದು ಭಾರತೀಯ ಪ್ರಾಜ್ಞವಂತಿಕೆಗೆ ಮತ್ತಷ್ಟು ಹಿರಿಮೆ ಸಂದಂತಾಗಿದೆ.


ಸತ್ಯಾ ನಾಡೆಲ್ಲಾ ಅವರಿಗೆ ಅಭಿನಂದನೆ ಮತ್ತು ಹೃತ್ಪೂರ್ವಕ ಶುಭಹಾರೈಕೆಗಳನ್ನು ಸಲ್ಲಿಸೋಣ.

Tag: Satya Nadella

ಕಾಮೆಂಟ್‌ಗಳಿಲ್ಲ: