ಅಲೆಗ್ಸಾಂಡರ್ ದೊರೆಯ ಮೂರು ಬಯಕೆಗಳು
ಇದು ಮಹಾನ್ ಗ್ರೀಕ್ ಸಾಮ್ರಾಟ ಅಲೆಕ್ಸಾಂಡರ್ ಬಗೆಗಿನ ಕಥೆ. ಹಲವಾರು ಸಾಮ್ರಾಜ್ಯಗಳನ್ನು ತನ್ನದಾಗಿಸಿಕೊಂಡ ಅಲೆಕ್ಸಾಂಡರ್ ದೊರೆ, ತನ್ನ ತಾಯ್ನಾಡಿನ ದಾರಿಯಲ್ಲಿ ಪಯಣಿಸುತ್ತಿದ್ದ. ಮಾರ್ಗ ಮಧ್ಯದಲ್ಲಿ ತೀವ್ರ ಅನಾರೋಗ್ಯಪೀಡಿತನಾದ ದೊರೆಗೆ ಸಾವು ಹತ್ತಿರ ಸುಳಿಯುತ್ತಿದೆ ಎಂದು ಅರ್ಥವಾಗತೊಡಗಿತ್ತು. ಸಾವಿನ ಸುಳಿವು ಬರುತ್ತಿದ್ದಂತೆಯೇ ಅಲೆಕ್ಸಾಂಡರ್ ದೊರೆಗೆ ತನ್ನ ಈ ಸಮಸ್ತ ವಿಜಯಗಳು, ತನ್ನ ಬೃಹತ್ ಸೈನ್ಯ, ಗಳಿಸಿದ ಅಪರಿಮಿತ ಸಂಪತ್ತು, ಇವೆಲ್ಲವೂ ಅರ್ಥಹೀನ ಎಂದು ಸ್ಪಷ್ಟವಾಗತೊಡಗಿತು. ಈಗ ಆತನಿಗೆ ಬೇಕಿದ್ದುದೊಂದೇ, ತಾನು ತನ್ನ ತಾಯಿಯನ್ನು ನೋಡಿ ಆಕೆಗೆ ಅಂತಿಮ ನಮನ ಸಲ್ಲಿಸಬೇಕು, ಅಷ್ಟೇ.
ಆದರೆ, ಆತ ತನ್ನ ಮೂಲದಿಂದ ಹಲವು ಗಡಿಯಾಚೆಗಳ ಪರಿಧಿಯನ್ನು ದಾಟಿ ಬಂದುಬಿಟ್ಟಿದ್ದ! ಆತನಿಗೆ ತನ್ನ ಆ ಕನಿಷ್ಠ ಬಯಕೆ ಪೂರೈಸಿಕೊಳ್ಳುವುದೂ ಕಷ್ಟಸಾಧ್ಯವಾಗಿತ್ತು. ಲೋಕವನ್ನೇ ಗೆದ್ದ ಸಾಮ್ರಾಟ, ಅಸಹಾಯಕತೆಯ ಅಡಿಯಾಳಾಗಿ ಬದುಕಿನ ಯಾವುದೇ ಬಯಕೆಗಳ ಪೂರೈಕೆಯೂ ಅಸಾಧ್ಯವೆನಿಸುವ ವಿಹ್ವಲತೆಯ ದೆಸೆಯಲ್ಲಿ ತೇಲುತ್ತಿದ್ದು, ತನ್ನ ಕೊನೆಯುಸಿರಿನ ಎಣಿಕೆಯಲ್ಲಿದ್ದ.
ಇಂತಹ ಸ್ಥಿತಿಯಲ್ಲಿದ್ದ ಚಕ್ರವರ್ತಿ ತನ್ನ ಪ್ರಧಾನ ಸೇನಾಪತಿಗಳನ್ನು ಕರೆದು ಹೀಗೆಂದು ಭಿನ್ನವಿಸಿದ. “ನಾನು ಈ ಭೂಲೋಕದ ಯಾತ್ರೆಯನ್ನು ಕೊನೆಗಾಣಿಸುವ ಹಂತ ತಲುಪಿದ್ದೇನೆ. ನನ್ನ ಮೂರು ಸಣ್ಣ ಬಯಕೆಗಳನ್ನು ತಪ್ಪದಂತೆ ನಡೆಸಿಕೊಡಬೇಕೆಂದು ತಮ್ಮಲ್ಲಿ ನನ್ನ ವಿನಂತಿ”.
ಸೇನಾಧಿಪತಿಗಳಾದರೋ ಚಕ್ರವರ್ತಿ ತಮಗೇನು ಆದೆಶಿಸುತ್ತಿದ್ದಾನೆ ಎಂದು ಚಕಿತಗೊಂಡಿದ್ದಾರೆ. ಹಿಂದೆ ಎಲ್ಲವನ್ನೂ ಹೀಗೇ ಆಗಬೇಕು ಎಂದು ಅಜ್ಞಾಪಿಸುತ್ತಿದ್ದ ತಮ್ಮ ದೊರೆಯ ಮಾತಿನಲ್ಲಿ ಇದೇನು ಇಂತ ಆರ್ತತೆ? ತಮ್ಮ ದೊರೆಯ ಪರಿಸ್ಥಿಥಿ ಅವರೆಲ್ಲರ ಕಣ್ಣಿನಲ್ಲೂ ನೀರು ತರಿಸಿತು. “ತಮ್ಮ ಆಜ್ಞೆಗೆ ಕಾದಿದ್ದೇವೆ ರಾಜನ್” ಒಬ್ಬ ಅಧಿಕಾರಿ ಗೌರವ ಸೂಚಕವಾಗಿ ನುಡಿದ.
ಇದೋ ನನ್ನ ಮೊದಲ ಇಚ್ಛೆ. “ನನ್ನ ಶವ ಪೆಟ್ಟಿಗೆಯನ್ನು ನನ್ನನ್ನು ಉಪಚರಿಸುತ್ತಿರುವ ವೈದ್ಯರೇ ಸಮಾಧಿ ಸ್ಥಳಕ್ಕೆ ಕೊಂಡೊಯ್ಯಬೇಕು.” ಸ್ವಲ್ಪ ತಡೆದು ದೊರೆ ಹೇಳಿದ, “ಎರಡನೆಯದು, ನನ್ನ ಶವಪೆಟ್ಟಿಗೆಯನ್ನು ಕೊಂಡೊಯ್ಯುವ ಸಮಾಧಿ ಮಾರ್ಗವನ್ನು ನನ್ನ ಖಜಾನೆಯಲ್ಲಿ ತುಂಬಿರುವ ಸ್ವರ್ಣ, ವಜ್ರ ವೈಡೂರ್ಯ, ರತ್ನಗಳಿಂದ ಶೋಭಾಯಮಾನವಾಗಿಸಬೇಕು” ಉಸಿರನ್ನು ಉಸುರಲು ಕಷ್ಟ ಪಡುತ್ತಿದ್ದ ದೊರೆ ತನ್ನ ಮೂರನೆಯ ಇಚ್ಚೆಯನ್ನು ವ್ಯಕ್ತ ಪಡಿಸಿದ. “ನನ್ನ ಕೊನೆಯ ಇಚ್ಚೆಯೆಂದರೆ, ನನ್ನ ಸಮಾಧಿಯಿಂದ ನನ್ನೆರಡೂ ಕೈಗಳೂ ಹೊರಗೆ ಕಾಣುವಂತೆ ವ್ಯವಸ್ಥೆಯಾಗಬೇಕು”.
ಚಕ್ರವರ್ತಿಯ ಈ ವಿಚಿತ್ರ ಬಯಕೆಗಳು ಅಲ್ಲಿ ನೆರೆದಿದ್ದವರನ್ನು ವಿಸ್ಮಯಗೊಳಿಸಿತ್ತು. ಯಾರಲ್ಲೂ ಮಾತು ಹೊರಡುತ್ತಿಲ್ಲ. ಚಕ್ರವರ್ತಿಗೆ ಅತಿ ಆಪ್ತನಾಗಿದ್ದ ಸೇನಾಧಿಕಾರಿಯೊಬ್ಬ ದೊರೆಯ ಸನಿಹಕ್ಕೆ ಬಂದು ಆತನ ಹಸ್ತವನ್ನು ತನ್ನ ಹೃದಯಕ್ಕೆ ಅಪ್ಪಿ ಹಿಡಿಯುತ್ತ ಉಲಿದ.
“ರಾಜನ್, ತಾವು ವ್ಯಕ್ತಪಡಿಸಿದ ಬಯಕೆಗಳು ನಮಗೆ ತಾವು ನೀಡಿದ ಅನುಜ್ಞೆಗಳೇ ಸರಿ, ನಾವು ಅದನ್ನು ಶಿರಸಾವಹಿಸಿ ನಡೆಸುತ್ತೇವೆ ಎಂದು ತಮಗೆ ತಿಳಿದೇ ಇದೆ. ಆದರೆ, ತಮ್ಮ ಈ ಬಯಕೆಗಳ ಹಿಂದಿನ ಅರ್ಥವನ್ನು ತಿಳಿಸುವ ಕೃಪೆ ಮಾಡಬೇಕು ಎಂದು ಭಿನ್ನವಿಸಿದ”.
ತನಗೆ ಸಾಧ್ಯವಾದ ಮಿತಿಯಲ್ಲಿ ದೀರ್ಘ ಉಸಿರೆಳೆದ ಅಲೆಗ್ಸಾಂಡರ್ ದೊರೆ ಹೇಳಿದ, “ನಾನು ಜೀವನದಲ್ಲಿ ಕಲಿತ ಮೂರು ಪಾಠಗಳನ್ನು ಈ ವಿಶ್ವ ಅರಿಯಬೇಕೆಂಬುದಷ್ಟೇ ನನ್ನ ಉದ್ದೇಶವಾಗಿದೆ. ಈ ದೇಹವನ್ನು ವೈದ್ಯರೇ ಕೊಂಡೊಯ್ಯಬೇಕು ಎಂದು ನಾನು ಹೇಳುತ್ತಿರುವುದಕ್ಕೆ ಕಾರಣವೇನೆಂದರೆ, ಯಾವುದೇ ವೈದ್ಯರೂ ಯಾವುದೇ ಜೀವಿಯನ್ನೂ ಶಾಶ್ವತವಾಗಿರಿಸಲು ಸಾಧ್ಯವಿಲ್ಲ. ದೇಹವನ್ನು ಸಾವಿನ ದವಡೆಯಿಂದ ಪಾರು ಮಾಡುವ ಶಕ್ತಿ ಅವರಿಗ್ಯಾರಿಗೂ ಇಲ್ಲ. ಈ ವಿಚಾರದಲ್ಲಿ ಅವರು ಸಂಪೂರ್ಣ ನಿಸ್ಸಹಾಯಕರು. ಆದ್ದರಿಂದ ಯಾರೇ ಆಗಲಿ ಎಲ್ಲವೂ ಸಾಧ್ಯ ಎಂಬ ಭ್ರಮೆ ಹೊಂದದಿರಲಿ. ಇದು ನಾನು ಕಲಿತ ಜೀವನದ ಅತ್ಯಮೂಲ್ಯ ಪಾಠ.”
“ಇನ್ನು ನನ್ನ ಶವ ಯಾತ್ರೆಯ ಮಾರ್ಗಕ್ಕೆ ಏಕೆ ಸ್ವರ್ಣ, ವಜ್ರ ವೈಡೂರ್ಯ, ರತ್ನಗಳ ಶೋಭೆ? ಇದರ ಅರ್ಥ ಇಷ್ಟೇ. ನನ್ನ ಇಡೀ ಜೀವನವನ್ನೆಲ್ಲ ನಾನು ಸಂಪತ್ತನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ಕಳೆದೆ. ನಾನು ಏನನ್ನು ಬೆಲೆ ಬಾಳುವುದು, ನನ್ನದು ಎಂದು ಭ್ರಮಿಸಿದ್ದೇನೋ, ಅದರಲ್ಲಿ ಒಂದಿನಿತನ್ನೂ ನಾನು ನನ್ನೊಂದಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಅದರಿಂದ ಜನರು ತಿಳಿಯಲಿ. ಸಂಪತ್ತನ್ನು ಅರಸಿ ಅದರ ಬೆನ್ನು ಹತ್ತುವುದು ಕೇವಲ ಸಮಯವನ್ನು ವ್ಯರ್ಥ ಮಾಡುವ ಹುಚ್ಚುತನ ಅಷ್ಟೇ!”.
“ನನ್ನ ಮೂರನೆಯ ಇಚ್ಛೆ, ನನ್ನ ಎರಡೂ ಕೈಗಳೂ ನನ್ನ ಸಮಾಧಿಯಿಂದ ಹೊರಚಾಚಿರಬೇಕು. ಇದರಿಂದ ಜನ ಅರಿಯಲಿ, ನಾನು ಇಲ್ಲಿಗೆ ಬರಿಗೈಯಲ್ಲಿ ಬಂದೆ. ಅದೇ ಬರಿಗೈಯಲ್ಲೇ ಹೊರಡುತ್ತಿದ್ದೇನೆ”. ಹೀಗೆ ಹೇಳುತ್ತಿರುವಂತೆಯೇ, ಸಾಮ್ರಾಟ ಅಲೆಗ್ಸಾಂಡರ್ ದೊರೆಯ ಕಣ್ಣುಗಳು ಇನ್ನೇನೂ ಉಳಿದಿಲ್ಲವಂತೆ ಸಾವಧಾನದಲ್ಲಿ ಮುಚ್ಚಿಕೊಳ್ಳತೊಡಗಿದವು.
(ನನ್ನ ಗೆಳೆಯರೊಬ್ಬರು ನಾಲ್ಕು ವರ್ಷಗಳ ಹಿಂದೆ ಈ-ಮೈಲ್ನಲ್ಲಿ ಕಳುಹಿಸಿದ್ದ Three Wishes of Alexander ಕಥೆಯನ್ನು ಕನ್ನಡದಲ್ಲಿ ಮೂಡಿಸಲು ಪ್ರಯತ್ನಿಸಿದ್ದೇನೆ.)
Tag: Three Wishes of Alexander

ಕಾಮೆಂಟ್‌ಗಳು