ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬನ್ನಿ ಜಪಾನಿಯರಿಂದ ಕಲಿಯೋಣ

ಬನ್ನಿ ಜಪಾನಿಯರಿಂದ ಕಲಿಯೋಣ

ಜಪಾನ್ ಎಂದರೆ ನಮ್ಮ ಕಣ್ಣಮುಂದೊಂದು  ಸ್ವಾವಲಂಬನೆಯ ಶುಭ್ರ ಸಮಾಜದ ಕಲ್ಪನೆ ಬಂದು ನಿಲ್ಲುತ್ತದೆ.  ಬನ್ನಿ ಅದರ ಒಳಗನ್ನು ಒಂದಷ್ಟು ಅರಿತು, ಕಲಿಯಲಿಕ್ಕೆ, ಅಭ್ಯಸಿಸಲಿಕ್ಕೆ  ಯತ್ನಿಸೋಣ:

೧. ಜಪಾನಿನ ಮಕ್ಕಳು ಪ್ರತಿ ದಿನ ತಮ್ಮ ಶಿಕ್ಷಕರೊಡಗೂಡಿ ಹದಿನೈದು ನಿಮಿಷಗಳ ಕಾಲ, ತಮ್ಮ ಶಾಲೆಯನ್ನು ಸ್ವಚ್ಛಗೊಳಿಸುತ್ತಾರೆ.  ಇದು ಜಪಾನಿಯರಲ್ಲಿ ನಿರಹಂಕಾರ ಪ್ರವೃತ್ತಿ ಮತ್ತು ಶುಭ್ರತೆಯ ಕಾಳಜಿಗಳನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

೨. ಜಪಾನಿಯರ ತಮ್ಮ ನಾಯಿಗಳನ್ನು ಕರೆದೊಯ್ಯುವಾಗ, ತಮ್ಮ  ನಾಯಿಗಳು ಉಂಟು ಮಾಡಬಹುದಾದ ಗಲೀಜುಗಳನ್ನು ಬಾಚಿ ತೆಗೆದೊಯ್ಯಲು, ಚೀಲಗಳನ್ನೂ ಕೊಂಡೊಯ್ಯುತ್ತಾರೆ.  ನೈರ್ಮಲ್ಯತೆ  ಮತ್ತು ತಮ್ಮ ಪರಿಸರವನ್ನು ಚೊಕ್ಕವಾಗಿಟ್ಟುಕೊಳ್ಳಬೇಕೆಂಬ ತುಡಿತ ಜಪಾನಿಯರ ಬದುಕಿನ ನೈತಿಕತೆಯ ಪ್ರಧಾನ ಗುಣವಾಗಿದೆ.

೩. ಜಪಾನಿಯರು ನಿರ್ಮಲೀಕರಣ ನೌಕರರನ್ನು ‘ಹೆಲ್ತ್ ಇಂಜಿನಿಯರ್’ ಎಂದು ಸಂಬೋಧಿಸುತ್ತಾರೆ.  ಅವರಿಗೆ ಸಲ್ಲುವ ಸಂಭಳ ಸುಮಾರು 5000ದಿಂದ 8000 ಅಮೆರಿಕನ್ ಡಾಲರ್ಗಳು.  ಈ ಹುದ್ದೆಯ ಅಭ್ಯರ್ಥಿಗಳಿಗೆ ಮಾತುಕತೆಯ  ಸಂದರ್ಶನದ ಜೊತೆಜೊತೆಗೆ ಬರವಣಿಗೆಯ ಪರೀಕ್ಷೆಯೂ ಇದೆ.

೪.  ಜಪಾನ್ ದೇಶಕ್ಕೆ ಯಾವುದೇ ನೈಸರ್ಗಿಕ ಸಂಪನ್ಮೂಲಗಳ ವರವೂ ಇಲ್ಲ.  ವರ್ಷಂಪ್ರತಿ ಉಂಟಾಗುವ ನೂರಾರು ಭೂಕಂಪಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿವೆ.  ಇವ್ಯಾವುವ’ಕ್ಕೂ, ಈ ದೇಶ ವಿಶ್ವದ ಎರಡನೇ ಬೃಹತ್ ಆರ್ಥಿಕ ಸಮುದಾಯವಾಗುವುದನ್ನು ತಪ್ಪಿಸಲಿಕ್ಕೆ ಸಾಧ್ಯವಾಗಿಲ್ಲ.

೫.  ಹಿರೋಷಿಮಾ ನಗರ ಪರಮಾಣು ಬಾಂಬಿನಿಂದ ಸಂಪೂರ್ಣ ವಿನಾಶವಾದ ಕೇವಲ ಹತ್ತು ವರ್ಷಗಳ ಒಳಗಾಗಿಯೇ ಆರ್ಥಿಕವಾಗಿ ಸುದೃಢವಾಗಿ ಮೇಲೆದ್ದಿತು.

೬. ಜಪಾನಿನಲ್ಲಿ ರೈಲುಗಳಲ್ಲಿ, ಹೋಟೆಲ್ಲುಗಳಲ್ಲಿ ಮತ್ತು ಒಳಾಂಗಣಗಳಲ್ಲಿ ಮೊಬೈಲ್ ಬಳಸುವುದು ನಿಷಿದ್ದ.

೭. ಜಪಾನಿನ ಒಂದನೇ ತರಗತಿಯಿಂದ ಆರನೆಯ ತರಗತಿಯವರೆಗೆ ಓದುವ ಮಕ್ಕಳು ಜನರೊಡನೆ ಹೇಗೆ ಬಾಳುವುದೆಂಬ ನೀತಿ ಪಾಠವನ್ನು ಅಭ್ಯಾಸ ಮಾಡುತ್ತಾರೆ.

೮.ಜಪಾನಿಯರು ಅತ್ಯಂತ ಶ್ರೀಮಂತರಾದರೂ,  ಅವರುಗಳು ಸೇವಕರನ್ನು ನೇಮಿಸಿಕೊಳ್ಳುವುದಿಲ್ಲ. ತಂದೆ ತಾಯಂದಿರೇ ತಮ್ಮ ಮನೆ ಮಕ್ಕಳನ್ನು ಪಾಲಿಸುವ ಜವಾಬ್ಧಾರಿ ನಿರ್ವಹಿಸುತ್ತಾರೆ.

೯. ಜಪಾನಿನ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮೂರನೆಯ ತರಗತಿಯವರೆಗೆ ಯಾವುದೇ ಪರೀಕ್ಷೆಗಳಿಲ್ಲ.  ಕಾರಣವೇನೆಂದರೆ ಶಿಕ್ಷಣದ ಮೂಲ ಉದ್ಧೇಶ,  ಜ್ಞಾನದ ಕುರಿತಾದ ಪರಿಚಯ ಮತ್ತು ಸಚ್ಚಾರಿತ್ರ್ಯವನ್ನು ಮೂಡಿಸುವುದು.  ಪರೀಕ್ಷೆಗಳು ಮತ್ತು ವೈಚಾರಿಕತೆಯನ್ನು ಹೇರುವುದಲ್ಲ.

೧೦. ಜಪಾನಿಯರು ಬಫೆ ಹೋಟೆಲ್ಲುಗಳಲ್ಲಿ ಎಷ್ಟು ಬೇಕೋ ಅಷ್ಟು ಆಹಾರವನ್ನು ಮಾತ್ರ ತೆಗೆದುಕೊಂಡು,  ಯಾವುದೇ ತರದಲ್ಲಿಯೂ ಆಹಾರವು ನಿರುಪಯುಕ್ತವಾಗುವುದಂತೆ ಎಚ್ಚರ ವಹಿಸುತ್ತಾರೆ.

೧೧. ಜಪಾನಿನಲ್ಲಿ ರೈಲುಗಳ ವಿಳಂಬದ ಗತಿ ವರ್ಷವೊಂದರಲ್ಲಿ ಏಳು ಸೆಕೆಂಡುಗಳಷ್ಟು  ಮಾತ್ರ.  ಅವರು ಸಮಯಕ್ಕೆ ಪ್ರತಿ ನಿಮಿಷ, ಸೆಕೆಂಡುಗಳ ಮಾನದಲ್ಲೂ ಅತ್ಯಂತ ಶ್ರದ್ಧೆಯಿಂದ  ನಡೆದುಕೊಳ್ಳುತ್ತಾರೆ.

೧೨. ಜಪಾನಿನ ಮಕ್ಕಳು ಶಾಲೆಯಲ್ಲಿಯೂ ಸಹಾ ಊಟವಾದ ನಂತರ ಹಲ್ಲುಗಳನ್ನು ಬ್ರಷ್ ಮೂಲಕ ಸ್ವಚ್ಛಗೊಳಿಸಿಕೊಳ್ಳುತ್ತಾರೆ.  ಸಣ್ಣ ವಯಸ್ಸಿನಿಂದಲೇ  ಆರೋಗ್ಯವನ್ನು  ಕಾಪಾಡಿಕೊಳ್ಳುವುದನ್ನು ಅವರು ಅಭ್ಯಾಸ ಮಾಡುತ್ತಾರೆ.

೧೩. ಜಪಾನಿನ ಶಾಲಾ ಮಕ್ಕಳು ತಮ್ಮ ಊಟವನ್ನು ಪೂರೈಸಲು ಅರ್ಧಗಂಟೆಯಷ್ಟು ಸಾವಕಾಶದ   ಸಮಯವನ್ನು  ತೆಗೆದುಕೊಳ್ಳುತ್ತಾರೆ.  ನಿಧಾನವಾಗಿ ಆಹಾರವನ್ನು ಆಸ್ವಾದಿಸುತ್ತಾ ಪಚನವಾಗುವಂತೆ ತಿನ್ನುವುದನ್ನು ಅವರು ಸಣ್ಣವಯಸ್ಸಿನಿಂದಲೇ ರೂಢಿಸಿಕೊಳ್ಳುತ್ತಾರೆ. ಇದಕ್ಕೆ ಜಪಾನಿವರು ನೀಡುವ ವ್ಯಾಖ್ಯಾನ.”ಈ ವಿದ್ಯಾರ್ಥಿಗಳೇ ಜಪಾನಿನ ಭವಿಷ್ಯ”

ಇದು ಜಪಾನಿನ ಕುರಿತಾಗಿನ  ಕೆಲವೊಂದು ಗೌರವಯುತ ವಿವರಗಳನ್ನು  ಗೆಳೆಯರೊಬ್ಬರು ಇಂಗ್ಲಿಷಿನಲ್ಲಿ ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.  ಇದನ್ನು ತಿಳಿದ ಹಾಗೆ ನನ್ನ ಪ್ರೀತಿಯ ಕನ್ನಡದಲ್ಲಿ ತಿಳಿಸಲು ಪ್ರಯತ್ನಿಸಿದ್ದೇನೆ.  ಈ ಸಂದೇಶದ ಕಿಡಿ ನಮ್ಮ ಮಕ್ಕಳ, ನಮ್ಮ ದೇಶದ ಬದುಕಿನಲ್ಲೂ ಎಂದಾದರೂ ಹೊರಹೊಮ್ಮಲಿ ಎಂಬುದು ಹೃದಯಪೂರ್ವಕ ಆಶಯ.

Tag: Banni Japaniyarinda Kaliyona,  Come on Let us learn from Japanese

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ