ನಿನ್ನ ಕಂಗಳ ಕೊಳದಿ
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು
ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು
ನೀನೊಂದು ದಡದಲ್ಲಿ ನಾನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಡವು
ಯಾವ ದೋಣಿಯು ತೇಲಿ ಎಂದು ಬರುವುದೊ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು
ಸಾಹಿತ್ಯ: ಎಂ. ಎನ್. ವ್ಯಾಸರಾವ್
Tag: Ninna Kangala Koladi Beladingalilidante
Tag: Ninna Kangala Koladi Beladingalilidante
ಕಾಮೆಂಟ್‌ಗಳು