ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೀ ಮೀಟಿದ ನೆನಪೆಲ್ಲವೂ

ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ
ಇಂದೇತಕೋ ನಾ ನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನಾ ಬಹುಜನ್ಮದಾ ಕಥೆಯೆಂದು ಮನಹೇಳಿದೆ
ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ

ಬಾಳಲ್ಲಿ ನೀ ಬರೆದೆ ಹೊಸ ಪ್ರೇಮಕಾದಂಬರಿ
ಧರೆಗಿಳಿದು ಬಂದಂತ ಸೌಂಧರ್ಯ ಸುರಸುಂದರಿ
ಶೃತಿ ಸೇರಿದೆ ಬಾಳು ಹಿತವಾಗಿದೆ
ಸುರಲೋಕದ ಸುಖ ನಮದಾಗಿದೆ
ಎದೆ ಕೂಗಿದೆ ಮನ ಆಡಿದೆ
ಎದೆ ಕೊಗಿಲೇ ಇದೊ ಹಾಡಿದೆ
ಮನಸು ಮನಸು ಬೆರೆಯೆ ಬಾಳು ಸೊಗಸು
ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ

ಆ ಭಾನು ಈ ಭೂಮಿ ನೋಡಲ್ಲಿ ಒಂದಾಗಿದೆ
ಮಗುವಂತೆ ನೀನೆಂದು ಒಂದಾಗು ಎದೆ ಎಂದಿದೆ
ಸಂಗಾತಿ ನಾ ನಿನ್ನ ಜೊತೆಯಾಗುವೆ 
ಎಂದೆಂದಿಗೂ ನಿನ್ನ ಉಸಿರಾಗುವೆ
ನೀನಿಲ್ಲದೇ ಇರಲಾರೆನು
ನಿನ್ನಿಂದ ನಾ ದೂರಾಗೆನು
ನಗುವ ನಲಿವ ಜಗವ ಮರೆತು ಬೆರೆವ
ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ
ಇಂದೇತಕೋ ನಾ ನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನಾ ಬಹುಜನ್ಮದಾ ಕಥೆಯೆಂದು ಮನಹೇಳಿದೆ
ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ

ರಚನೆ: ಆರ್. ಎನ್. ಜಯಗೋಪಾಲ್
ಸಂಗೀತ: ವಿಜಯಾನಂದ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್ ಮತ್ತು ಎಸ್. ಜಾನಕಿ
Tag: Nee meetida nenapellavoo ede tumbi haadaagide

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ