ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತೇಲಿಸೋ ಇಲ್ಲ ಮುಳುಗಿಸೊ

ತೇಲಿಸೋ ಇಲ್ಲ ಮುಳುಗಿಸೊ

ತೇಲಿಸೋ ಇಲ್ಲ ಮೂಳುಗಿಸೂ
ನಿನ್ನ ಕಾಲಿಗೆ ಬಿದ್ದೇನೂ ಪರಮಕೃಪಾಳೂ 

ಸತಿಸುತ ಧನದಾಸೇ ಎ೦ದೆ೦ಬ ಮೋಹದಿ
ಹಿತದಿ೦ದ ಅತಿನೊಂದು ಬೆಂಡಾದೆನೋ
ಗತಿ ಕೂಡುವರ ಕಾಣೆ ಮತಿಯ ಪಾಲಿಸೂ ಲಕ್ಷ್ಮಿ
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ  

ಜರರೋಗ ದಾರಿದ್ರ್ಯ ಕಲ್ಮಶವೆ೦ಬ
ಶರಧಿಯೂಳಗೆ ಬಿದ್ದು ಮುಳುಗಿದೇನೋ
ಸ್ಥಿರವಲ್ಲ ದೇಹವು ನೆರೆ ನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೂ ಹರಿಯೇ 

ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೋದೆನು ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸ೦ಗವಿತ್ತು ಪಾಲಿಸೂ ಹರಿಯೇ

ಸಾಹಿತ್ಯ: ಪುರಂದರದಾಸರು

Tag: Teliso illa mulugiso


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ