ರಾಮಮಂತ್ರವ ಜಪಿಸೋ
ರಾಮಮಂತ್ರವ
ಜಪಿಸೋ
ರಾಮಮಂತ್ರವ
ಜಪಿಸೊ ಹೇ ಮನುಜಾ|
ಆ
ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ
ತನ್ನ ಭಾಮೆಗೆ ಪೇಳಿದ ಮಂತ್ರ
ಕುಲಹೀನನಾದರು
ಕೂಗಿ ಜಪಿಸುವ ಮಂತ್ರ
ಸಲೆ
ಬೀದಿಯೊಳು ಉಚ್ಚರಿಪ ಮಂತ್ರ
ಹಲವು
ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ
ಸ್ವರ್ಗ ಸೂರೆಗೊಂಬುವ ಮಂತ್ರ
ಮರುತಾತ್ಮಜ
ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ
ಋಷಿಗಳಲ್ಲಿ ಸೇರಿದ ಮಂತ್ರ
ದುರಿತ
ಕಾನನಕಿದು ದಾವಾನಲ ಮಂತ್ರ
ಪೊರೆದು
ವಿಭೀಷಣಗೆ ಪಟ್ಟ ಕಟ್ಟಿದ ಮಂತ್ರ
ಜ್ಞಾನನಿಧಿ
ನಮ್ಮ ಆನಂದತೀರ್ಥರು
ಸಾನುರಾಗದಿ
ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ
ಸೋಮನೆನಿಪ ನಮ್ಮ
ದೀನರಕ್ಷಕ
ಪುರಂದರವಿಠಲನ ಮಂತ್ರ
ಸಾಹಿತ್ಯ:
ಪುರಂದರದಾಸರು
ಚಿತ್ರ: ಶ್ರೀರಾಮಚಂದ್ರನ ಗೆಳೆಯ ಗುಹ ಸೀತಾ ರಾಮ ಲಕ್ಷ್ಮಣರನ್ನು ಸರಯೂ
ನದಿ ದಾಟಿಸುತ್ತಿರುವುದು
Tag: Rama mantrava japiso
ಕಾಮೆಂಟ್‌ಗಳು