ಜ್ಯೋತಿ ಬೆಳಗುತಿದೆ
ಜ್ಯೋತಿ
ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ
ಮಾತು
ಮನಂಗಳಿಂದತ್ತತ್ತ ಮೀರಿದ
ಸಾದತಿಶಯದ
ನಿರುಪಾಧಿಕ ನಿರ್ಮಲ
ಜ್ಯೋತಿ
ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ
ಶಿವಧರ್ಮನಾಳವೆಂತೆಂಬ
ಕಂಬದ ಮೇಲೆ
ಸುವಿವೇಕ
ಹೃದಯಾಬ್ಜ ಪಣತೆಯೊಳು
ಸವೆಯದ
ಸದ್ಭಕ್ತಿ ರಸತೈಲ ತೀವಿದ
ಪ್ರವಿಮಲ
ಕಳೆಯೆಂಬ ಬತ್ತಿವಿಡಿದು ದಿವ್ಯ
ಜ್ಯೋತಿ
ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ
ಮುಸುಕಿದ
ವಿಷಯ ಪತಂಗ ಬಿದ್ದುರುಳೆ ತಾ
ಮಸಬುದ್ಧಿಯೆಂಬ
ಕತ್ತಲೆಯಳಿಯೆ
ಮಸಗಿ
ಸುಜ್ಞಾನವೆಂತೆಂಬ ಮಹಾಪ್ರಭೆ
ಪಸರಿಸಿ
ಮಾಯಾಕಾಳಿಕೆ ಪೊರ್ದದನುಪಮ
ಜ್ಯೋತಿ
ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ
ಪ್ರಣವಾಕಾರದ
ಗುಣ ಮೂರು ಮುಟ್ಟದ
ಗಣನೆಗತೀತಾರ್ಥವೆನೆ
ತೋರುವ
ಅಣುಮಾತ್ರ
ಚಲನೆಯಿಲ್ಲದ ಮೋಕ್ಷ ಚಿಂತಾ
ಮಣಿಯೆನಿಸುವ
ಶಂಭುಲಿಂಗವೆ ತಾನಾದ
ಜ್ಯೋತಿ
ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ
ಸಾಹಿತ್ಯ: ನಿಜಗುಣ ಶಿವಯೋಗಿಗಳು
Tag: Jyoti Belagutide
ಚಾ ಶಿ ಜಯಕುಮಾರ್
ಪ್ರತ್ಯುತ್ತರಅಳಿಸಿMatch dene
ಪ್ರತ್ಯುತ್ತರಅಳಿಸಿ