ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೆಕ್ಕೆ ಇದ್ದರೆ ಸಾಕೇ

ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೇ

ಕಾಲೊಂದಿದ್ದರೆ ಸಾಕೇ
ಚಿಗರಿಗೆ ಬೇಕು ಕಾನು
ಗಾಳಿಯ ಮೇಲೆ ತಾನು
ಜಿಗಿದು ಆಡೋಕೇ
ರೆಕ್ಕೆ ಇದ್ದರೆ ಸಾಕೇ

ಹೂವೊಂದಿದ್ದರೆ ಸಾಕೇ
ಬ್ಯಾಡವೆ ಗಾಳಿ
ನೀವೆ ಹೇಳಿ
ಕಂಪ ಬೀರೋಕೇ

ಮುಖವೊಂದಿದ್ದರೆ ಸಾಕೇ
ದುಂಬಿಯಾ ತಾವಾ
ಬ್ಯಾಡವೆ ಹೂವಾ
ಜೇನ ಹೀರೋಕೇ

ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೇ

ನೀರೊಂದಿದ್ದರೆ ಸಾಕೇ
ಬ್ಯಾಡವೆ ಹಳ್ಳಾ
ಬಲ್ಲವ ಬಲ್ಲಾ
ತೊರೆಯು ಹರಿಯೋಕೇ

ಮೋಡಾ ಇದ್ದರೆ ಸಾಕೇ
ಬ್ಯಾಡವೆ ಭೂಮಿ
ಹೇಳಿ ಸ್ವಾಮಿ
ಮಳೆಯು ಸುರಿಯೋಕೇ

ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೇ

ಕಣ್ಣೊಂದಿದ್ದರೆ ಸಾಕೇ
ಬ್ಯಾಡವೆ ಮಂದೆ
ಕಣ್ಣಿನ ಮುಂದೆ
ನಿಮಗೆ ಕಾಣೋಕೇ

ಕೊರಳೊಂದಿದ್ದರೆ ಸಾಕೇ
ಬ್ಯಾಡವೆ ಹಾಡು
ಎಲ್ಲರ ಜೋಡಿ
ಕೂಡಿ ಹಾಡೋಕೇ

ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೇ

ಕಾಲೊಂದಿದ್ದರೆ ಸಾಕೇ
ಚಿಗರಿಗೆ ಬೇಕು ಕಾನು
ಗಾಳಿಯ ಮೇಲೆ ತಾನು
ಜಿಗಿದು ಆಡೋಕೇ

ರೆಕ್ಕೆ ಇದ್ದರೆ ಸಾಕೇ

ಚಿತ್ರ: ಚಿನ್ನಾರಿ ಮುತ್ತಾ
ಸಾಹಿತ್ಯ: ಡಾ. ಎಚ್. ಎಸ್. ವೆಂಕಟೇಶಮೂರ್ತಿ
ಸಂಗೀತ: ಸಿ. ಅಶ್ವಥ್
ಗಾಯನ: ರೇಖಾ ಮತ್ತು ಸಂಗಡಿಗರು


Tag: Rekke Iddare saake

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ