ಪ್ರಜ್ವಲ್ ದೇವರಾಜ್
ಪ್ರಜ್ವಲ್ ದೇವರಾಜ್
ಸಿಕ್ಸರ್ ಮೂಲಕ ಸ್ಯಾಂಡಲ್ ವುಡ್ ಬಣ್ಣದ ಲೋಕಕ್ಕೆ ಕಾಲಿಟ್ಟ ಯುವನಟ ಪ್ರಜ್ವಲ್ ದೇವರಾಜ್, ಕನ್ನಡದ ಪ್ರಸಿದ್ಧ ಹಿರಿಯ ಕಲಾವಿದರಾದ ದೇವರಾಜ್ ಅವರ ಮಗ. ತಂದೆ ಖಳನಾಯಕರಾಗಿ ಮಿಂಚಿದ್ದರೆ ಮಗ ನಾಯಕನಟನಾಗಿ ಮಿಂಚುತ್ತಿದ್ದಾರೆ. ಜುಲೈ 4 ಪ್ರಜ್ವಲ್ ಅವರ ಹುಟ್ಟು ಹಬ್ಬ. ‘ಸಿಕ್ಸರ್’ನಲ್ಲಿ ಎಲ್ಲರ ಗಮನಸೆಳೆದ ಪ್ರಜ್ವಲ್ ನಟನೆಯ ಡಜನ್ ಚಿತ್ರಗಳು ಈವೆರೆಗೆ ಬಿಡುಗಡೆಯಾಗಿವೆ. ಮಿಸ್ಟರ್ ಡೂಪ್ಲಿಕೇಟ್ ಚಿತ್ರದಲ್ಲಿ ಭರವಸೆ ಮೂಡಿಸಿದ್ದ ಅವರ ‘ಭದ್ರ’ ಚಿತ್ರವನ್ನು ಜನ ಮೆಚ್ಚಿದ್ದಾರೆ.
ಪ್ರಜ್ವಲ್ ಅವರ ‘ಸೂಪರ್ ಶಾಸ್ರಿ’ ಹಾಗೂ ‘ಸಾಗರ್’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ‘ಗಲಾಟೆ’ ಚಿತ್ರೀಕರಣ ಮುಗಿದಿದೆ. ಗೋಕುಲ ಕೃಷ್ಣ, ಸುಮ್ ಸುಮ್ನೆ, ದಿಲ್ ಕಾ ರಾಜಾ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ.
ಒಬ್ಬ ತಾರೆಗಿರಬೇಕಾದ ಸುಂದರ ವರ್ಚಸ್ಸು ಹೊಂದಿರುವ ಪ್ರಜ್ವಲ್ ಅವರಿಗೆ ಚಿತ್ರರಂಗದಲ್ಲಿ ಉತ್ತಮ ಹೆಸರು ಮಾಡಿರುವ ತಂದೆ ದೇವರಾಜ್ ಅವರ ಮಾರ್ಗದರ್ಶನವಿದೆ. ಅವರ ತಾಯಿ ಕೂಡಾ ಚಿತ್ರರಂಗದಲ್ಲಿ ಕಲಾವಿದೆಯಾಗಿದ್ದವರು. ಪ್ರಜ್ವಲ್ ಅವರಿಗೆ ಉತ್ತಮ ಚಿತ್ರಗಳು ದೊರಕಲಿ. ಕಲಾವಿದನಾಗಿ, ವೃತ್ತಿಪರನಾಗಿ ಹಾಗೂ ಬದುಕೆಂಬ ರಂಗದಲ್ಲಿ ಅವರಿಗೆ ಉತ್ತಮ ಯಶಸ್ಸು ದೊರಕಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.
Tag: Prajwal Devaraj
ಕಾಮೆಂಟ್‌ಗಳು