ಎದ್ದೇಳು ಮಂಜುನಾಥ
ಎದ್ದೇಳು ಮಂಜುನಾಥ
ಏಳು ಬೆಳಗಾಯಿತು
ಧರ್ಮ ದೇವತೆಗಳು
ನಿನ್ನ ದರುಶನಕೆ ಕಾದಿಹರು
ಅಣ್ಣಪ್ಪ ಸ್ವಾಮಿಯು ನಿನ್ನ
ಆಜ್ಞೆಗೆ ನಿಂತಿಹನು
ಎದ್ದೇಳು ಮಂಜುನಾಥ
ಎದ್ದೇಳು
ಮುನಿಗಣಂಗಳು ಸ್ತೋತ್ರ ಮಾಡುತಿಹರು
ದೇವಾದಿದೇವತೆಗಳು ನಿನ್ನ ದರುಶನಕೆ
ಕಾದಿಹರು
ಎದ್ದೇಳು ಮಂಜುನಾಥ
ಎದ್ದೇಳು
ಮೃಗರಾಜನು ನಿನ್ನ ದರುಶನಕೆ ಬಂದಿಹನು
ಗಜರಾಜನು ನಿನಗೆ
ಚಾಮರವ ಬೀಸುತಿಹನು
ನಿನ್ನ ಆಭರಣಗಳಿಗಾಗಿ ಆದಿಶೇಷನು
ನಿನ್ನ ಸೇರಲು ಕಾತರಿಸುತಿಹನು
ಎದ್ದೇಳು ಮಂಜುನಾಥ
ಎದ್ದೇಳು
ಕೋಗಿಲೆಗಳು, ಕೋಗಿಲೆಗಳು, ಸುಸ್ವರದಿ
ಗಾನಮೊಳಗುತಿಹವು
ಸವಿಮಾತಿನ ಅರಗಿಳಿಯು
ನಿನ್ನ ಧ್ಯಾನದಲಿಹುದು
ಪಾರಿವಾಳಗಳು ನಿನ್ನ ದರುಶನಕೆ ಕಾದಿಹವು
ಹೆಗ್ಗಡೆಯ ದಂಪತಿಗಳು
ನಿನ್ನಯ ಸೇವೆಗೆ ಕಾತರಿಸುತಿಹರು
ತಡವು ಏತಕೆ ಪ್ರಭುವೇ
ದರುಶನವ ನೀಡೇಳು
ಎದ್ದೇಳು ಮಂಜುನಾಥ
ಎದ್ದೇಳು
ನೇತ್ರಾವತಿಯಲ್ಲಿ ಮಿಂದು ಜನರು
ವಿಧವಿಧದಿ ಸೇವೆಗಳ ಗೈಯುತಿಹರು
ಸರ್ವರಕ್ಷಕಕ
ಸರ್ವರಕ್ಷಕನು ನೀನು ದರುಶನವ ನೀಡೇಳು
ವಿಪ್ರರೆಲ್ಲರು ಕೂಡಿ ವೇದ ಘೋಷಿಸುತಿಹರು
ಮೋಕ್ಷವನು ನೀಡೇಳು
ರವಿಯ ಕಿರಣವು
ನಿನ್ನ ಮಹಾಕಾರವನು ಬೆಳಗುತಿಹುದು
ದರುಶನವ ನೀಡೇಳು
ಏಳು ಬೆಳಗಾಯಿತು
ಎದ್ದೇಳು ಮಂಜುನಾಥ
ಎದ್ದೇಳು.....
Phto Courtesy: @n@nth kudva
ಸಾಹಿತ್ಯ: ಎಸ್. ಎಂ. ಪುಟ್ಟಯ್ಯರಾಜು
Photo Courtesy: @n@nth kudva
Tag: Eddelu Manjunatha elu belagayitu
Tag: Eddelu Manjunatha elu belagayitu
ಧನ್ಯವಾದಗಳು
ಪ್ರತ್ಯುತ್ತರಅಳಿಸಿ