ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉದಯರಾಗ



ಉದಯರಾಗ

ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು;
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು.

ಬೆಳಕಿನ ಕಣ್ಣುಗಳಿಂದಾ ಸೂರ್ಯನು; ನೋಡುವನು, ಬಿಸಿಲೂಡುವನು;
ಚಿಳಿಪಿಳಿಹಾಡನು ಹಾಡಿಸಿ ಹಕ್ಕಿಯ, ಗೂಡಿನ ಹೊರ ಹೊರ ದೂಡುವನು.

ಬಂಗಾರದ ಚೆಲು ಬಿಸಿಲ ಕಿರೀಟದ; ಶ್ರಂಗಾರದ ತಲೆ ಎತ್ತುವನು;
ತೆಂಗಿನ ಕಂಗಿನ ತಾಳೆಯ ಬಾಳೆಯ, ಅಂಗಕೆ ರಂಗನು ಮೆತ್ತುವನು.

ಮಾಡಿನ ಹುಲ್ಲಲಿ ಚಿನ್ನದ ಗೆರೆಯನು; ಎಳೆಯುವನು ರವಿ ಎಳೆಯುವನು;
ಕೂಡಲೆ ಕೋಣೆಯ ಕತ್ತಲೆ ಕೊಳೆಯನು, ತೊಳೆಯುವನು ರವಿ ಹೊಳೆಯುವನು.

ಮಲಗಿದ ಕೂಸಿನ ನಿದ್ದೆಯ ಕಸವನು; ಗುಡಿಸುವನು ಕಣ್ ಬಿಡಿಸುವನು;
ಹುಲುಗಿಡ ಹೂವಿಗೆ ಪರಿಪರಿ ಬಣ್ಣವ ಉಡಿಸುವನು ಹನಿ ತೊಡಿಸುವನು.

ಏರುವನು ರವಿ ಏರುವನು; ಬಾನೊಳು ಸಣ್ಣಗೆ ತೋರುವನು;
ಏರಿದವರು ಚಿಕ್ಕವನಿರಬೇಕೆಲೆಎಂಬಾ ಮಾತನು ಸಾರುವನು.

ಸಾಹಿತ್ಯ: ಪಂಜೆ ಮಂಗೇಶರಾವ್


Tag: Udayaraga, Mooduvanu ravi mooduvanu

Photo:  At Kukkarahalli Lake, Mysore
On 28.08.2013 at 6:25 AM

ಕಾಮೆಂಟ್‌ಗಳು

  1. ಮೂಡುವನು ರವಿ ಮೂಡುವನು ... ಈ ಕವನವನ್ನು ಬರೆದವರು ರಾಷ್ಟ್ರ ಕವಿ ಕುವೆಂಪುರವರು, ಪಂಜೆ ಮಂಗೇಶ ರಾಯರು ಅಲ್ಲ

    ಪ್ರತ್ಯುತ್ತರಅಳಿಸಿ
  2. ಮೂಡುವನು ರವಿ ಮೂಡುವನು ... ಈ ಕವನವನ್ನು ಬರೆದವರು ರಾಷ್ಟ್ರ ಕವಿ ಕುವೆಂಪುರವರು, ಪಂಜೆ ಮಂಗೇಶ ರಾಯರು ಅಲ್ಲ

    ಪ್ರತ್ಯುತ್ತರಅಳಿಸಿ
  3. ಇದು ೧೦೦% ಪಂಜೆ ಮಂಗೇಶರಾವ್ ಅವರ ಕವನವೇ ನಾವು ಶಾಲೆಯಲ್ಲಿ ಕಲಿತಿದ್ದೇವೆ.

    ಪ್ರತ್ಯುತ್ತರಅಳಿಸಿ
  4. ಇದೇ ರೀತಿ ಹಾಡು ರಾಘವೇಂದ್ರ ಸ್ವಾಮಿಗಳ ಮೇಲೂ ಇದೆ...ತಮ್ಮ ಹತ್ತಿರ ಇದ್ದರೆ ದಯವಿಟ್ಟು ತಿಳಿಸಿ.

    ಪ್ರತ್ಯುತ್ತರಅಳಿಸಿ
  5. ಬರೆದವರು ಯಾರೆಂದು ಸರಿಯಾದ ಮಾಹಿತಿ ಕೊಡಿ ದಯವಿಟ್ಟು...

    ಪ್ರತ್ಯುತ್ತರಅಳಿಸಿ
  6. ನಮ್ಮ ಎಜುಕೇಸನ್ ಮಿನಿಸ್ಟರ್

    ಗೆ ಕೇಳಿ.ಕರೆಕ್ಟಾಗಿ ಹೇಳ್ತಾರೆ

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ