ಉದಯರಾಗ
ಉದಯರಾಗ
ಮೂಡುವನು ರವಿ ಮೂಡುವನು; ಕತ್ತಲೊಡನೆ
ಜಗಳಾಡುವನು;
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು.
ಬೆಳಕಿನ ಕಣ್ಣುಗಳಿಂದಾ ಸೂರ್ಯನು; ನೋಡುವನು,
ಬಿಸಿಲೂಡುವನು;
ಚಿಳಿಪಿಳಿಹಾಡನು ಹಾಡಿಸಿ ಹಕ್ಕಿಯ, ಗೂಡಿನ
ಹೊರ ಹೊರ ದೂಡುವನು.
ಬಂಗಾರದ ಚೆಲು ಬಿಸಿಲ ಕಿರೀಟದ; ಶ್ರಂಗಾರದ
ತಲೆ ಎತ್ತುವನು;
ತೆಂಗಿನ ಕಂಗಿನ ತಾಳೆಯ ಬಾಳೆಯ, ಅಂಗಕೆ
ರಂಗನು ಮೆತ್ತುವನು.
ಮಾಡಿನ ಹುಲ್ಲಲಿ ಚಿನ್ನದ ಗೆರೆಯನು; ಎಳೆಯುವನು
ರವಿ ಎಳೆಯುವನು;
ಕೂಡಲೆ ಕೋಣೆಯ ಕತ್ತಲೆ ಕೊಳೆಯನು, ತೊಳೆಯುವನು
ರವಿ ಹೊಳೆಯುವನು.
ಮಲಗಿದ ಕೂಸಿನ ನಿದ್ದೆಯ ಕಸವನು; ಗುಡಿಸುವನು
ಕಣ್ ಬಿಡಿಸುವನು;
ಹುಲುಗಿಡ ಹೂವಿಗೆ ಪರಿಪರಿ ಬಣ್ಣವ ಉಡಿಸುವನು ಹನಿ ತೊಡಿಸುವನು.
ಏರುವನು ರವಿ ಏರುವನು; ಬಾನೊಳು ಸಣ್ಣಗೆ
ತೋರುವನು;
“ಏರಿದವರು ಚಿಕ್ಕವನಿರಬೇಕೆಲೆ” ಎಂಬಾ
ಮಾತನು ಸಾರುವನು.
ಸಾಹಿತ್ಯ: ಪಂಜೆ ಮಂಗೇಶರಾವ್
Tag: Udayaraga, Mooduvanu ravi mooduvanu
Photo: At Kukkarahalli Lake, Mysore
On 28.08.2013 at 6:25 AM
ಮೂಡುವನು ರವಿ ಮೂಡುವನು ... ಈ ಕವನವನ್ನು ಬರೆದವರು ರಾಷ್ಟ್ರ ಕವಿ ಕುವೆಂಪುರವರು, ಪಂಜೆ ಮಂಗೇಶ ರಾಯರು ಅಲ್ಲ
ಪ್ರತ್ಯುತ್ತರಅಳಿಸಿಕ್ಷಮಿಸಿ. ಇದು ಪಂಜೆಯವರ ಕವನವೇ. ರಾಷ್ಟ್ರ ಕವಿ ಕುವೆಂಪುರವರದ್ದಲ್ಲ.
ಅಳಿಸಿಮೂಡುವನು ರವಿ ಮೂಡುವನು ... ಈ ಕವನವನ್ನು ಬರೆದವರು ರಾಷ್ಟ್ರ ಕವಿ ಕುವೆಂಪುರವರು, ಪಂಜೆ ಮಂಗೇಶ ರಾಯರು ಅಲ್ಲ
ಪ್ರತ್ಯುತ್ತರಅಳಿಸಿWritten by Rahstrakavi Kuvempu
ಪ್ರತ್ಯುತ್ತರಅಳಿಸಿIt is by G S Shivarudrappa
ಪ್ರತ್ಯುತ್ತರಅಳಿಸಿಇದು ೧೦೦% ಪಂಜೆ ಮಂಗೇಶರಾವ್ ಅವರ ಕವನವೇ ನಾವು ಶಾಲೆಯಲ್ಲಿ ಕಲಿತಿದ್ದೇವೆ.
ಪ್ರತ್ಯುತ್ತರಅಳಿಸಿಇದೇ ರೀತಿ ಹಾಡು ರಾಘವೇಂದ್ರ ಸ್ವಾಮಿಗಳ ಮೇಲೂ ಇದೆ...ತಮ್ಮ ಹತ್ತಿರ ಇದ್ದರೆ ದಯವಿಟ್ಟು ತಿಳಿಸಿ.
ಪ್ರತ್ಯುತ್ತರಅಳಿಸಿಬರೆದವರು ಯಾರೆಂದು ಸರಿಯಾದ ಮಾಹಿತಿ ಕೊಡಿ ದಯವಿಟ್ಟು...
ಪ್ರತ್ಯುತ್ತರಅಳಿಸಿನಮ್ಮ ಎಜುಕೇಸನ್ ಮಿನಿಸ್ಟರ್
ಪ್ರತ್ಯುತ್ತರಅಳಿಸಿಗೆ ಕೇಳಿ.ಕರೆಕ್ಟಾಗಿ ಹೇಳ್ತಾರೆ