ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ

ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ
ಕಮಲವಾ ಕೈಯಲ್ಲಿ ಹಿಡಿದೋಳೆ
ಕಮಲನಾಭನ ಹೃದಯ ಕಮಲದಲಿ ನಿಂತೋಳೆ
ಕಮಲಿನೀ ಕರಮುಗಿವೆ ಬಾಮ್ಮಾ
ಪೂಜೆಯಾ ಸ್ವೀಕರಿಸೆ ದಯಮಾಡಿಸಮ್ಮಾ

ಕಾವೇರಿ ನೀರ ಅಭಿಷೇಕಕಾಗಿ
ನಿನಗಾಗಿ ನಾ ತಂದೆನಮ್ಮಾ
ಕಂಪನ್ನು ಚೆಲ್ಲೋ ಸುಮರಾಶಿಯಿಂದ
ಹೂಮಾಲೆ ಕಟ್ಟಿರುವೆನಮ್ಮಾ
ಬಂಗಾರ ಕಾಲ್ಗೆಜ್ಜೆ ನಾದ
ನಮ್ಮ ಮನೆಯೆಲ್ಲವಾ ತುಂಬುವಂತೆ
ನಲಿಯುತ, ಕುಣಿಯುತಾ
ಒಲಿದುಬಾ, ನಮ್ಮ ಮನೆಗೆ ಬಾ

ಶ್ರೀದೇವಿ ಬಾಮ್ಮಾ, ಧನಲಕ್ಷ್ಮಿ ಬಾಮ್ಮಾ
ಮನೆಯನ್ನು ಬೆಳಕಾಗಿ ಮಾಡು
ದಯೆತೋರಿಬಂದು, ಮನದಲ್ಲಿ ನಿಂತು
ಸಂತೋಷ ಸೌಭಾಗ್ಯ ನೀಡು
ಸ್ಥಿರವಾಗಿ ಬಂದಿಲ್ಲಿ ನೆಲೆಸೂ
ತಾಯೆ ವರಮಹಾಲಕ್ಷ್ಮಿಯೇ ಹರಸು
ಕರವನು ಮುಗಿಯುವೆ,
ಆರತಿ ಈಗ ಬೆಳಗುವೆ

ಚಿತ್ರ: ಹೊಸ ಇತಿಹಾಸ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಶಂಕರ್ ಗಣೇಶ್
ಗಾಯನ: ಎಸ್. ಜಾನಕಿ

Tag: Kamalada mogadole kamalada kannole

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ