ಬಾನಲ್ಲು ನೀನೇ ಭುವಿಯಲ್ಲು ನೀನೆ
ಬಾನಲ್ಲು ನೀನೇ ಭುವಿಯಲ್ಲು ನೀನೆ
ಎಲ್ಲೆಲು ನೀನೇ ನನ್ನಲ್ಲು ನೀನೇ
ಹೂವಲ್ಲಿ ನಿನ್ನ ಮೊಗವನ್ನು ಕಂಡೆ
ಮೊಗದಲ್ಲಿ ನಿನ್ನ ಹೂ ನಗೆಯ ಕಂಡೆ
ನಗುವಲ್ಲಿ ನಿನ್ನ ಚೆಲುವನ್ನು ಕಂಡೆ
ಚೆಲುವಲ್ಲಿ ನಿನ್ನ ಒಲವನ್ನು ಕಂಡೆ
ಒಲವಿಂದ ಬಾಳ ಹೂಸದಾರಿ ಕಂಡೆ
ಮುಗಿಲಲ್ಲು ನೀನೇ ಮನದಲ್ಲು ನೀನೇ
ಮುಗಿಲಲ್ಲು ನೀನೇ ಮನದಲ್ಲು ನೀನೆ
ಎಲ್ಲೆಲು ನೀನೇ ನನ್ನಲ್ಲು ನೀನೇ
ಬಾನಲ್ಲು ನೀನೇ ಭುವಿಯಲ್ಲು ನೀನೆ
ಬಿರುಗಾಳಿ ಬೀಸಿ ಎದುರಾದರೇನು
ಭೂಕಂಪವಾಗಿ ನೆಲ ಬಿರಿದರೇನು
ಕಡಲೆಲ್ಲ ಹೊಮ್ಮಿ ಬಳಿ ಬಂದರೇನು
ಮಳೆಯಂತೆ ಬೆಂಕಿ ಧರೆಗಿಳಿದರೇನು
ಜೊತೆಯಿರಲು ನೀನು
ಭಯಪಡೆನು ನಾನು
ರವಿಯಲ್ಲು ನೀನೇ ಶಶಿಯಲ್ಲು ನೀನೇ
ರವಿಯಲ್ಲು ನೀನೇ ಶಶಿಯಲ್ಲು ನೀನೆ
ಎಲ್ಲೆಲು ನೀನೇ ನನ್ನಲ್ಲು ನೀನೇ
ಬಾನಲ್ಲು ನೀನೇ ಭುವಿಯಲ್ಲು ನೀನೆ
ಚಿತ್ರ: ಬಯಲುದಾರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಜಾನಕಿ
Tag: Banallu neene bhuviyallu neene, baanallu neene bhuviyallu neene
ಕಾಮೆಂಟ್‌ಗಳು