ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಾರೇ ರಂಗನ ಕರೆಯ ಬಂದವರು


ಯಾರೇ ರಂಗನ ಯಾರೇ ಕೃಷ್ಣನ 
ಯಾರೇ ರಂಗನ ಕರೆಯ ಬಂದವರು

ಗೋಪಾಲಕೃಷ್ಣನ ಪಾಪವಿನಾಶನ 
ಈ ಪರಿಯಿಂದಲಿ ಕರೆಯ ಬಂದವರು

ವೇಣು ವಿನೋದನ ಪ್ರಾಣ ಪ್ರಿಯನ 
ಜಾಣೆಯರರಸನ ಕರೆಯ ಬಂದವರು

ಕರಿರಾಜ ವರದನ ಪರಮ ಪುರುಷನ 
ಪುರಂದರ ವಿಠ್ಠಲನ ಕರೆಯ ಬಂದವರು

ಸಾಹಿತ್ಯ: ಪುರಂದರದಾಸರು

Tag: Yare rangana yare krishnana, Yaare Rangana Yaare Krishnana

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ