ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ

ಜಗದೀಶ್ವರೀ... ಅಮ್ಮಾ...
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ
ಮೇಲು ಕೀಳು ಎಂದು ಮನುಜ ತಂದುಕೊಂಡ ದಳ್ಳುರಿ
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ
ಗಾಳಿ, ನೀರು, ಬೆಳಕು, ಭೂಮಿ, ಗಗನಕೆಲ್ಲಿ ಜಾತಿ;
ಈ ಐದರಿಂದ ಆದ ನಮಗೆ ಏಕೆ ಇಂಥ ನೀತಿ?
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ...

ಕಾಡಕಲ್ಲ ಶಿಲ್ಪಿ ಕೆತ್ತಲದುವೆ ದೇವರಾಯಿತೇ?
ಬೇಡಿದೆಲ್ಲ ಬಯಕೆ ನೀಡುವಂತ ಶಕ್ತಿ ಬಂದಿತೇ?
ಬುದ್ಧಿ ಕೇಂದ್ರವೆನಿಸಿ ಗುಡಿಯು ಶಕ್ತಿ ಬಂದಿತು
ಭಾವದಾವೇಗತುಂಬಿ ದೈವ ನೆಲೆಸಿತು
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ

ಹುಟ್ಟುವಾಗ ಒಂದೆ ರೀತಿ, ಸತ್ತ ಮೇಲೆ ಇಲ್ಲ ಜಾತಿ,
ಇರುವ ನಡುವೆ ನಮಗೆ ಏಕೆ ಭೇಧಭಾವ ಭ್ರಾಂತಿ?
ಅನ್ನದಗುಳಿನಲ್ಲಿ ಇಹುದೆ ಜಾತಿಯೆಂಬ ಮುದ್ರೆ,
ಎಲ್ಲ ತನ್ನ ಮಕ್ಕಳೆಂದು ಮುದ್ದಿಸದೇ ನಿದ್ರೆ?
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ...

ನೀನೆ ಪ್ರೇಮರೂಪವೆಂದು ಜಗವು ಸಾರಿದೇ,
ಒಲಿದ ಮನಗಳೆರಡುಕೂಡೆ ಹರಸಬಾರದೇ?
ಹೆಣ್ಣುನೋವ ಹೆಣ್ಣು ದೈವ ಅರಿಯಲಾರದೇ?
ನಮ್ಮ ಬಾಳ ಇರುಳು ಹಗಲು ನಿನ್ನದಾಗಿದೆ

ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ
ಮೇಲು ಕೀಳು ಎಂದು ಮನುಜ ತಂದುಕೊಂಡ ದಳ್ಳುರಿ
ಗಾಳಿ, ನೀರು, ಬೆಳಕು, ಭೂಮಿ, ಗಗನಕೆಲ್ಲಿ ಜಾತಿ?
ಈ ಐದರಿಂದ ಆದ ನಮಗೆ ಏಕೆ ಇಂಥ ನೀತಿ?
ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ...

ಚಿತ್ರ: ಕಾವೇರಿ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯನ: ಎಸ್. ಜಾನಕಿ




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ