ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇದೇ ನಾಡು ಇದೇ ಭಾಷೆ

ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿವಾಣಿಯ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ

ಚಾಮುಂಡಿ ರಕ್ಷೆಯು ನಮಗೆ ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ

ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ

ಚಿತ್ರ: ತಿರುಗುಬಾಣ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ಸತ್ಯಂ
ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ