ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ


ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ

ಕನಸುಗಳು ಸವಿಗನಸುಗಳು, ನಿನ್ನಿಂದ ನನಸಾಗಿದೆ
ನಿನ್ನಾ ಜೊತೆ ಸೇರಿ, ಸುಖವೇನೊ ನಾ ಕಂಡೆ ಇಂದೆ
ಮಾತುಗಳು ಸವಿಮಾತುಗಳು, ಮುತ್ತಂತೆ ಸೊಗಸಾಗಿದೆ
ನಿನ್ನಾ ಜೊತೆ ಸೇರಿ, ಒಲವೇನೊ ನಾ ಕಂಡೆ ಇಂದೆ
ಓ ಗೆಳೆಯ ನನ್ನಿನಿಯ ನಿನ್ನಾಸೆ ನನ್ನಾಸೆ ಒಂದೇನೆ ಇನ್ನೆಂದಿಗೂ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ

ಕಣ್ಣಿನಲಿ ಕಣ್ಣ ಮಿಂಚಿನಲಿ, ಈ ಜೀವ ತೇಲಾಡಿದೆ
ಹೀಗೇ ಇರುವಾಸೆ, ಹೂವಲ್ಲಿ ನಾ ದುಂಬಿಯಂತೆ
ಸ್ನೇಹದಲಿ ನಿನ್ನ ಮೋಹದಲಿ, ನನಗಿಂದು ಹಿತವಾಗಿದೆ
ಹೀಗೇ ಇರುವಾಸೆ, ಹಾಯಾಗಿ ಮರೆತೆಲ್ಲ ಚಿಂತೆ
ಓ ಗೆಳತಿ ನನ್ನರಸಿ ನೀ ನಂಬು ಎಂದೆಂದು ನಾ ನಿನ್ನ ಬಿಡಲಾರೆನು
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ

ಚಿತ್ರ: ಆಟೋ ರಾಜ 
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಹಾಡಿದವರು: ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ