ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರೀತಿ ಹೊನಲೇ ಹಾಯಾಗಿರೆಲೇ

ಪ್ರೀತಿ ಹೊನಲೇ ಹಾಯಾಗಿರೆಲೇ
ಬಾಳಲ್ಲಿ ಬಂಗಾರವಾಗೆಲೇ
ಪ್ರೀತಿ ಹೊನಲೇ ಹಾಯಾಗಿರೆಲೇ
ಬಾಳಲ್ಲಿ ಬಂಗಾರವಾಗೆಲೇ
ಜೋs... ಜೋs...
ಜೋs.. ಜೋs...

ಹೂವಂತ ಚೆಲವೇ 
ಹಾಲಂತ ಮನವೇ
ತಾಯಾಸೆ ಒಲವೆಲ್ಲ ಏಕೆಂದೇ?
ನನ ನೋಡಿ ನಗುವೇ
ನೆನೆದೇನು ಅಳುವೇ
ಈ ನೋಟ ಸಂಕೇತ ಏನೆಂದೇ?
ಹೇಳೇ ಕಂದಾ, ಬಾಳಿಗಂದ
ನಗೆ ಮುಂದೆ ಅಳು ಹಿಂದೆ ಏನೆಂಬೆಯಾ?
ಪ್ರೀತಿ ಹೊನಲೇ ಹಾಯಾಗಿರೆಲೇ
ಬಾಳಲ್ಲಿ ಬಂಗಾರವಾಗೆಲೇ
ಜೋs... ಜೋs...
ಜೋs.. ಜೋs...

ಅನುವಾಗಿ ಬರುವಾ, ನಿನಗಾದ ದಿನವಾ
ಈ ತಾಯ ಮಡಿಲಲ್ಲಿ ನೀ ನೋಡೂ
ಮುಗುವಾಗಿ ಇರುವೇ, ತಾಯಾಗಿ ಮೆರೆವೇ
ನನ್ನಂತೆ ಈ ಹಾಡ ನೀ ಹಾಡೇs
ಕಾದುನಿಂದ ನಾಳಿನಂದ
ನಿನಗಾಗಿ ಗೆಲುವಿಂದ ಕಣ್ಣೀಡಿದೆ
ಪ್ರೀತಿ ಹೊನಲೇ ಹಾಯಾಗಿರೆಲೇ
ಬಾಳಲ್ಲಿ ಬಂಗಾರವಾಗೆಲೇ
  
ಚಿತ್ರ: ನವಜೀವನ
ಸಾಹಿತ್ಯ: ಸೋರಟ್ ಅಶ್ವಥ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಪಿ. ಸುಶೀಲಾ



Tag: Preeti Honale Haayagirele

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ