ನಿಲ್ಲು ನೀ, ನಿಲ್ಲು ನೀ ನೀಲವೇಣಿ
ನಿಲ್ಲು ನೀ,
ನಿಲ್ಲು ನೀ, ನಿಲ್ಲು ನೀ ನೀಲವೇಣಿ
ಕಂಗಳಿನ ಕಾಂತಿಯಲಿ ಹೊಂಗನಸಾ
ಕಾಣ್ವೆ ರಾಣೀ....
ನಿಲ್ಲು ನೀ, ನಿಲ್ಲು ನೀ ನೀಲವೇಣೀ...
ತೆಳು ನಡುವಿನ ಬಳ್ಳಿಯೂ
ತಾ ಬಾಗಲಿ ಬಳುಕಲೀ,
ಹೆಜ್ಜೆಯಾ ಗೆಜ್ಜೆಯಲೀ
ಪ್ರಣಯನಾದ ತುಂಬಲೀ,
ಕಡೆಗಣ್ಣಿನ ಕುಡಿನೋಟಾ...
ಕಡೆಗಣ್ಣಿನ ಕುಡಿನೋಟಾ
ವೈಯಾರದೀ ಹಾಡಲೀ,
ನವಯೌವನ ನಾಟ್ಯದಾ
ಅಲೆಯುಲಿಯೂ ಆಡಲೀ,
ಒಲಿದು ಬಾ, ನಲಿದೂ ಬಾ ನಾಗವೇಣೀ
ಕಂಗಳಿನ ಕಾಂತಿಯಲಿ ಹೊಂಗನಸಾ
ಕಾಣ್ವೆ ರಾಣೀ....
ಒಲಿದು ಬಾ, ನಲಿದೂ ಬಾ ನಾಗವೇಣೀ...
ಸುಂದರಿಯೇ...
ಸುಂದರಿಯೇ ಚಂದಿರನೂ
ನಿನ್ನಂದವ ಕಾಣುತಾ,
ಮರೆಯಾದನು ಮೋಡದಲೀ
ಮರೆಸಿ ಮುಖವ ನಾಚುತಾ;
ಸುರಕೋಗಿಲೆ ನೀನೂ
ನಿನ್ನ ಗಾನ ಕೇಳುತಾ -
ಆ ಕೋಗಿಲೆ ಮೂಖಾಯಿತು
ನಾಚಿ ಮೌನ ತಾಳುತಾ,
ಬಾರೆ ನೀ ಭಾಮಿನೀ
ನನ್ನ ಮೋಹಿನೀ,
ಕಂಗಳಿನ ಕಾಂತಿಯಲಿ ಹೊಂಗನಸಾ
ಕಾಣ್ವೆ ರಾಣೀs....
ಒಲಿದು ಬಾ, ನಲಿದೂ ಬಾ ನಾಗವೇಣೀ...
ಚಿತ್ರ: ಅಮರಶಿಲ್ಪಿ ಜಕಣಾಚಾರಿ
ಸಾಹಿತ್ಯ: ಚಿ. ಸದಾಶಿವಯ್ಯ
ಸಂಗೀತ: ಎಸ್. ರಾಜೇಶ್ವರರಾವ್
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು
ಪಿ. ಸುಶೀಲ
Tag: Nillu nee, Nillu nee. Neelaveni
ಕಾಮೆಂಟ್‌ಗಳು