ಬಸವರಾಜ ಪುರಾಣಿಕರು
ಬಸವರಾಜ ಪುರಾಣಿಕರು
ಹಿರಿಯ ವಿದ್ವಾಂಸ, ಪ್ರಾಧ್ಯಾಪಕ ಮತ್ತು ಸಾಹಿತಿಗಳಾದ್ದ ಬಸವರಾಜ ಪುರಾಣಿಕರ ಸಂಸ್ಮರಣಾ ದಿನವಿದು.
ಸಾಹಿತಿಗಳಾದ ಸಿದ್ಧಯ್ಯ ಪುರಾಣಿಕ ಮತ್ತು ಅನ್ನದಾನಯ್ಯ ಪುರಾಣಿಕರ ಸಹೋದರರಾಗಿದ್ದ ಬಸವರಾಜ ಪುರಾಣಿಕರು 1938 ವರ್ಷದ ಜನವರಿ 18ರಂದು ದ್ಯಾಂಪುರದಲ್ಲಿ ಜನಿಸಿದರು.
ಬಸವರಾಜ ಪುರಾಣಿಕರು ಕೆನಡಾದಲ್ಲಿ ಎಂಟೆಕ್ ಪದವಿ ಪಡೆದರೂ ಕನ್ನಡ ನಾಡಿನ ಜೊತೆಗೆ ಅವಿನಾವ ಸಂಬಂಧ ಇರಿಸಿಕೊಂಡು ಹೈದರಾಬಾದ್ ಕರ್ನಾಟಕ ವಿಮೋಚನಾ ಮತ್ತು ಕರ್ನಾಟಕ ಏಕೀಕರಣ ಹೋರಾಟಗಳಲ್ಲಿ ಸಕ್ರಿಯ ಪಾತ್ರನಿರ್ವಹಿಸಿದ್ದರಲ್ಲದೆ ಸಾಹಿತಿಗಳಾಗಿ 30ಕ್ಕೂ ಹೆಚ್ಚು ವೈವಿಧ್ಯಪೂರ್ಣ ಕೃತಿಗಳನ್ನು ರಚಿಸಿದ್ದರು.
ಬಸವರಾಜ ಪುರಾಣಿಕರ ಕೃತಿಗಳಲ್ಲಿ ಹಲವಾರು ಉರ್ದು ಕಥೆಗಳ ಅನುವಾದಗಳೂ ಸೇರಿವೆ. ಬಾಗಲಕೋಟೆ ಬಸವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ 25 ವರ್ಷ ಸೇವೆ ಸಲ್ಲಿಸಿದ್ದ ಬಸವರಾಜ ಪುರಾಣಿಕರನ್ನು ಅವರ ಸಾಹಿತ್ಯ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2007 ವರ್ಷದ ಪ್ರಶಸ್ತಿ ನೀಡಿ ಗೌರವಿಸಿತ್ತು.
ಬಸವರಾಜ ಪುರಾಣಿಕ ಅವರು 2017 ವರ್ಷದ ಜೂನ್ 20 ರಂದ ಬೆಂಗಳೂರಿನಲ್ಲಿ ನಿಧನರಾದರು.
Prof Basavaraj Puranik
ಕಾಮೆಂಟ್‌ಗಳು