ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿತೇಂದ್ರ ಜೋಷಿ


ಜಿತೇಂದ್ರ ಜೋಷಿ


ನನಗೆ ಆಧ್ಯಾತ್ಮದ ಸಂತಸಕರ ಭಾಗವಹಿಕೆ ದೊರೆತಿದ್ದು ಸುಮಾರು 2002-2003 ವರ್ಷದಲ್ಲಿ.  ನಾನು ಸ್ವಾಮಿ ಸುಖಬೋಧಾನಂದರ 'ಮನಸ್ಸೇ ರಿಲ್ಯಾಕ್ಸ್ ಪ್ಲೀಸ್' ಓದಿ, ನಂತರದಲ್ಲಿ ಹಲವು ಬಾರಿ ಭಾಗವಹಿಸಿದ ಅವರ 'Living in Freedom Enquiry (LIFE) Program’ ಮತ್ತು ‘Existential Labs (E Labs) ಕಾರ್ಯಕ್ರಮಗಳು ನನ್ನನ್ನು ಪುನೀತನನ್ನಾಗಿಸಿವೆ.

ಈ ಹೆಜ್ಜೆಯಲ್ಲಿ ನನ್ನನ್ನು ಪ್ರಭಾವಿಸಿದ ಪ್ರಮುಖರು ಜಿತೇಂದ್ರ ಜೋಷಿ ಅವರು.  ಒಬ್ಬ ಗುರುವನ್ನು ಕಂಡಾಗ ಅವರ ಉಪದೇಶ ಹಿತವಾಗಿರುತ್ತೆ.  ಆದರೆ ಆ ಉಪದೇಶ ವಾಸ್ತವ ಬದುಕಿನಲ್ಲಿ ಕೆಲಸ ಮಾಡುತ್ತದೆಯೇ ಎಂಬುದು ಆಗಾಗ ಸಂದೇಹವಾಗಿ ಮೂಡುವುದಂತೂ ಖಂಡಿತ.

ನಾನು ಸ್ವಾಮಿ ಸುಖಬೋಧಾನಂದರ ಮೇಲೆ ಹೇಳಿದ ಕಾರ್ಯಕ್ರಮಗಳಿಗೆ ಹೋದಾಗ ಅಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜಿತೇಂದ್ರ ಜೋಷಿ ಅವರು ಮಾತನಾಡುತ್ತಿದ್ದದ್ದು, ನಡೆಯುತ್ತಿದ್ದದ್ದು, ಎಲ್ಲರೊಂದಿಗೆ ಬೆರೆಯುತ್ತಿದ್ದದ್ದು, ಎಲ್ಲಕ್ಕಿಂತ ಮುಖ್ಯವಾಗಿ ಸರಳವಾಗಿ ಸಂತಸಕರವಾಗಿರುತ್ತಿದ್ದುದು ನನ್ನನ್ನು ಅಪಾರವಾಗಿ ಸೆಳೆದು, ಇದ್ದರೆ ಹೀಗಿರಬೇಕು ಎಂದು ಪ್ರಭಾವಿಸಿತು.  ಅವರು ಅಂದಿನ ದಿನದಲ್ಲಿ ಬೆಂಗಳೂರಿನ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿದ್ದ ದೊಡ್ಡ ಕಾರುಗಳ ಮಾರಾಟ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಗಳಾಗಿದ್ದರು.  ಆದರೂ ಯಾವಾಗ ಅವರನ್ನು ಭೇಟಿ ಮಾಡಲು ಹೋದರೂ ಆಪ್ತರಾಗಿದ್ದರು.  ಅವರು ಮಂತ್ರಯೋಗ ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟಾಗ ಅದರಲ್ಲಿ ನನಗೆ ದೊರೆತ ಅನುಭವ ಜೀವನ ಪರ್ಯಂತ ಜೊತೆ ಇರುವಂತದ್ದು.

ಅವರು ಹಾಡುತ್ತಾರೆ,ಮಾತನಾಡುತ್ತಾರೆ, ಕೇಳಿಸಿಕೊಳ್ಳುತ್ತಾರೆ, ನಮ್ಮ ಒಳಕ್ಕಿಳಿಯುತ್ತಾರೆ. 

ಜಿತೇಂದ್ರ ಜೋಷಿ ಸಾರ್ ಹುಟ್ಟುಹಬ್ಬದ ಶುಭಹಾರೈಕೆಗಳು.  ಜೀವನದಲ್ಲಿ ಏನು ಪಡೆದುಬಂದಿದ್ದೇನೋ ತಿಳಿಯದು. ನಿಮ್ಮೊಡನೆ ಹಲವು ಬಾರಿ ಇದ್ದು ನಿಮ್ಮ ಕೃಪೆ ಹೊಂದಿರುವ ಸೌಭಾಗ್ಯವನ್ನಂತೂ ಖಂಡಿತ ಪಡೆದಿದ್ದೇನೆ. ನಮಸ್ಕಾರ.

On the birth day of Jitender Joshi Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ