ವಿ. ಎಸ್. ನೈಪಾಲ್
ವಿ. ಎಸ್. ನೈಪಾಲ್
“ಓದೆಂದರೆ ಬೇಸರಿಸುವ ಚುರುಕುಮತಿಯ ಹುಡುಗ. ಆದರೆ ಸುತ್ತಲೂ ಕತ್ತಲೆಯೇ ತುಂಬಿತ್ತು. ನನ್ನ ಬದುಕಿನ ಬಹುತೇಕ ವರ್ಷಗಳು ಈ ಖಾಲಿ ಭಾಗಗಳನ್ನು ತುಂಬಿಕೊಳ್ಳುವಲ್ಲಿಯೇ ಖಾಲಿಯಾಯಿತು.” 2001 ನೇ ಇಸವಿಯಲ್ಲಿ - ಸಾಹಿತ್ಯಕ್ಕಾಗಿ ನೊಬೆಲ್ ಪಡೆದ ವಿದ್ಯಾಧರ್ ಸೂರಜ್‌ಪ್ರಸಾದ್ ನೈಪಾಲ್ ತಮ್ಮ ಬಾಲ್ಯವನ್ನು ಕುರಿತು ಹೇಳುವುದು ಹೀಗೆ.
ವಿ.ಎಸ್.ನೈಪಾಲ್ ಅವರು 1932ರ ಆಗಸ್ಟ್ 17ರಂದು ಜನಿಸಿದರು. ಹುಟ್ಟಿದ ಊರು ಕೆರೆಬಿಯನ್ ದ್ವೀಪ ಟ್ರಿನಿಡಾಡ್. ಭಾರತದಿಂದ ವಲಸೆ ಬಂದ ಕುಟುಂಬ ಅವರದು. ಶಾಲೆಯಲ್ಲಿ ಕಲಿತದ್ದು ಸ್ವಲ್ಪ. ಹಿಂದಿ ಕಲಿಯಲು ಸಾಧ್ಯವಿರಲಿಲ್ಲ. ಆದರೂ, ಆ ದಿನಗಳಲ್ಲಿ ಅವರೊಬ್ಬರು ಚುರುಕುಮತಿ ಹುಡುಗ. ಆದರೆ, ಸುತ್ತ ಕತ್ತಲೆಯ ಪ್ರಭಾವಳಿ. ಆ ಕತ್ತಲೆಯ ಕಾರಣದಿಂದಲೇ ಬೆಳಕಿನತ್ತ ಅವರ ತುಡಿತ ಇನ್ನಷ್ಟು ಹೆಚ್ಚಾಯಿತು.
ತಮ್ಮ ಪೂರ್ವಿಕರು ಬಾಳಿದ ಭಾರತ ನೈಪಾಲ್ ಅವರಿಗೆ ಸದಾ ಆಸಕ್ತಿಯ ಚುಂಬಕ. ಈ ಕಾರಣ ಕುತೂಹಲದಿಂದಲೆ ರೂಪುಗೊಂಡ ಪುಸ್ತಕ - ‘ಭಾರತ: ಒಂದು ಗಾಯಗೊಂಡ ನಾಗರೀಕತೆ(India: A Wounded Civilization)’ . ಕೆರೆಬಿಯನ್‌ನಲ್ಲಿ ಕಂಡದ್ದು ಮತ್ತು ಕಲಿತದ್ದರ ಅಭಿವ್ಯಕ್ತಿ ‘ದಿ ಮಿಡಲ್ ಪ್ಯಾಸೇಜ್’. ಅಲೆದಾಟದಿಂದ ಅನುಭವ ಹರಳುಗಟ್ಟುತ್ತದೆ ಎಂಬುದು ನೈಪಾಲ್ ಅವರ ನಂಬುಗೆ. ಮುಸ್ಲಿಂ ಜಗತ್ತಿನ ಬಗ್ಗೆ ಅರಿಯಲಿಕ್ಕಾಗಿ ಇರಾನ್, ಪಾಕಿಸ್ತಾನ ಮತ್ತು ಸುತ್ತಮುತ್ತಲಿನ ದೇಶಗಳನ್ನು ಸುತ್ತಿದರು. ಮುಸ್ಲಿಂ ಮೂಲಭೂತವಾದಿ ಜಗತ್ತು ಕಂಡು ಬೆಚ್ಚಿದರು. ಆ ಅಚ್ಚರಿ- ತಲ್ಲಣಗಳ ಮೊತ್ತ ‘ಅಮಾಂಗ್ ದಿ ಬಿಲೀವರ್ಸ್!’ ಅದು ಮುಸ್ಲಿಂ ಜಗತ್ತಿನ ಕನ್ನಡಿ.
“ನಾನೊಬ್ಬ ತೆರೆದ ಕಣ್ಣಿನ ಬರಹಗಾರ, ಹುಟ್ಟಾ ಬರಹಗಾರ. ಬರೆದದ್ದು ಇಪ್ಪತ್ತಕ್ಕೂ ಹೆಚ್ಚು ಕೃತಿಗಳು, ಕಾದಂಬರಿಗಳು. ಆ ಉತ್ಸಾಹ - ಎಚ್ಚರ ನಿತ್ಯ ಜೀವಂತ. ಬರವಣಿಗೆಯ ಮಟ್ಟಿಗೆ ನಾನು ಚಿರಂಜೀವಿ. ಯೋಜನಾಬದ್ಧ ಬರವಣಿಗೆ ನನ್ನದಲ್ಲ. ನಾನು ಯಾವುದನ್ನೂ ಯೋಜಿಸುವುದಿಲ್ಲ. ಒಂದು ಪದ್ಧತಿಗೆ ಒಳಪಡುವ ಸ್ವಭಾವ ನನ್ನದಲ್ಲ. ನನಗೆ ಅನಿಸಿದ್ದನ್ನು, ಸ್ಪಷ್ಟವಾಗಿದ್ದನ್ನು ಬರೆದಿದ್ದೇನೆ” ಎನ್ನುತ್ತಾರೆ ನೈಪಾಲ್.
The Mystic Masseur - (1957) (film version: The Mystic Masseur (2001), The Suffrage of Elvira - (1958), Miguel Street - (1959), A House for Mr Biswas - (1961), Mr. Stone and the Knights Companion - (1963), A Flag on the Island - (1967), The Mimic Men - (1967), In a Free State - (1971), Guerrillas - (1975), A Bend in the River - (1979), Finding the Centre - (1984), The Enigma of Arrival - (1987), A Way in the World - (1994), Half a Life - (2001), Magic Seeds - (2004) ಮುಂತಾದವು ನೈಪಾಲ್ ಅವರ ಕಥಾನಕಗಳು.
ನೈಪಾಲರ ಇತರ ಚಿಂತನಪೂರ್ಣ ಬರಹಗಳೆಂದರೆ The Middle Passage: Impressions of Five Societies - British, French and Dutch in the West Indies and South America (1962), An Area of Darkness (1964), The Loss of El Dorado - (1969), The Overcrowded Barracoon and Other Articles (1972), India: A Wounded Civilization (1977), A Congo Diary (1980), The Return of Eva Perón and the Killings in Trinidad (1980), Among the Believers: An Islamic Journey (1981), Finding the Centre (1984), Reading & Writing: A Personal Account (2000), A Turn in the South (1989), India: A Million Mutinies Now (1990), Bombay (1994, with Raghubir Singh), Beyond Belief: Islamic Excursions among the Converted Peoples (1998), Between Father and Son: Family Letters (1999, edited by Gillon Aitken), The Writer and the World: Essays - (2002), Literary Occasions: Essays (2003, by Pankaj Mishra), A Writer's People: Ways of Looking and Feeling (2007), The Masque of Africa: Glimpses of African Belief (2010) ಮುಂತಾದವು.
ನೈಪಾಲ್ ಸಾಗಿಬಂದ ಹಾದಿ ದೊಡ್ಡದು. ಚಿಕ್ಕವನಾಗಿದ್ದಾಗ ಓದು ಎಂದರೆ ಮುಖ ತಿರುಗಿಸುತ್ತಿದ್ದ, ಮುಖ ಊದಿಸುತ್ತಿದ್ದ ಹುಡುಗ ಆನಂತರ ಪುಸ್ತಕದ ವ್ಯಾಖ್ಯಾನ ನೀಡಲು ಸಮರ್ಥನಾದ ಹಾದಿ ದೊಡ್ಡ ಹೆದ್ದಾರಿ. ಒಂದರ ಪಕ್ಕ ಒಂದು ಜೋಡಿಸಿಟ್ಟ ಪುಸ್ತಕಗಳನ್ನು ನೋಡಿದಾಗ ನಾನು ಏನೆನ್ನುವುದು ಅರ್ಥವಾಗುತ್ತೆ ಎಂದು ನೈಪಾಲ್ ಕಣ್ಣರಳಿಸುತ್ತಿದ್ದರು.
ನೈಪಾಲ್ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿಯಲ್ಲದೆ 1971ರಲ್ಲಿ ಬೂಕರ್ ಪುರಸ್ಕಾರ ಸಹಾ ಲಭಿಸಿತ್ತು. ಭಾರತೀಯ ರಕ್ತಸಂಬಂಧದಿಂದ ಬೆಳೆದ ಭಾರತೀಯ ಚಿಂತನ ಕ್ರಮದಲ್ಲಿ ಮೂಡಿಬಂದ ಈ ಮಹಾನ್ ಸಾಹಿತ್ಯ ಸೃಷ್ಟಿಕರ್ತ 2018ರ ಆಗಸ್ಟ್ 11ರಂದು ಈ ಲೋಕವನ್ನಗಲಿದರು.
On the birth anniversary of Nobel Prize winner for literature Sir Vidiadhar Surajprasad Naipaul
ಕಾಮೆಂಟ್‌ಗಳು