ಶಶಿಧರ ಚಿತ್ರದುರ್ಗ
ಶಶಿಧರ ಚಿತ್ರದುರ್ಗ
ಗೆಳೆಯ, ಯುವ ಪತ್ರಕರ್ತ ಶಶಿಧರ ಚಿತ್ರದುರ್ಗ ಅಪಾರ ಹುಮ್ಮಸ್ಸಿನ ಕ್ರಿಯಾಶೀಲ ಸಾಧಕ.
ಶಶಿಧರ ಚಿತ್ರದುರ್ಗ ಜನಿಸಿದ್ದು 1979ರ ಆಗಸ್ಟ್ 17ರಂದು. ಊರು ಹೇಳೋದೇ ಬೇಕಿಲ್ಲ. ಹೆಸರಲ್ಲೇ ಅಂಟಿಸಿಕೊಂಡಿದ್ದಾರೆ.
ಹುಟ್ಟಿದ್ದು, ಓದಿದ್ದು ಬೆಳೆದದ್ದು ಎಲ್ಲ ಚಿತ್ರದುರ್ಗದಲ್ಲಿ.
ಶಶಿಧರ ದುರ್ಗದ 'ಸುದ್ದಿಗಿಡುಗ' ಜಿಲ್ಲಾ ಪತ್ರಿಕೆಯಲ್ಲಿ ಪತ್ರಿಕೋದ್ಯಮ ಪ್ರಾರಂಭಿಸಿದರು. ಮುಂದೆ 'ಕನ್ನಡ ಪ್ರಭ' ಪತ್ರಿಕೆ ಸೇರಿದಾಗ 'ಸಿನಿಮಾ ಪತ್ರಿಕೋದ್ಯಮ'ದ ನಂಟು ಅಂಟಿತು. ಮುಂದೆ ಸಾಗಿದಂತೆ 'ಟೈಮ್ಸ್ ಆಫ್ ಇಂಡಿಯಾ' ಬಳಗದ 'ವಿಜಯ ನೆಕ್ಸ್ಟ್', 'ವಿಜಯ ಕರ್ನಾಟಕ'ದಲ್ಲಿ ಕಾರ್ಯನಿರ್ವಹಿಸಿದರು. 'ದಿ ಸ್ಟೇಟ್' ನೊಂದಿಗೆ ಡಿಜಿಟಲ್ ಪತ್ರಿಕೋದ್ಯಮ ಪರಿಚಯವಾಯ್ತು.
ಶಶಿಧರ ಚಿತ್ರದುರ್ಗ ಮುಂದೆ ಸ್ವತಂತ್ರ ಹಕ್ಕಿಯಾಗಿ ಫ್ರೀಲಾನ್ಸರ್ ಪತ್ರಿಕೋದ್ಯಮಿ ಆಗಿದ್ದಾರೆ. ಅವರು ಬರೆದ ಇಲ್ಲವೇ ಸಂಪಾದಿಸಿದ ಪ್ರಸಿದ್ಧ ಕೃತಿಗಳಲ್ಲಿ ಅರೆರೆ, ಬಂಗಾರದ ಮನುಷ್ಯ ಸಿದ್ಧಲಿಂಗಯ್ಯ, ಅಶ್ವತ್ಥ ನಾರಾಯಣ ಚಿತ್ರಪಥ, ಶೂಟಿಂಗ್ ಸೋಜಿಗ, ಚಿತ್ರ-ಕತೆ ಸಿನಿ ಹಾದಿಯಲ್ಲೊಂದು ಪಯಣ, ತಾರೆಗಳ ದುನಿಯ, ಕ್ಯಾಮರಾ ಕಣ್ಣಲ್ಲಿ ರಾಜ್, ಬಿ. ಜಯ ಮುಂತಾದವು ಸೇರಿವೆ.
ಶಶಿಧರ ಚಿತ್ರದುರ್ಗ ಅವರು ಚಿತ್ರಪಥ ಎಂಬ ಪೋರ್ಟಲ್ ನಡೆಸುತ್ತಿದ್ದಾರೆ. ಅದು ಕನ್ನಡ ಚಲನಚಿತ್ರ ಮತು ರಂಗಪ್ರೇಮಿಗಳ ಮನಸ್ಸನ್ನು ಗೆದ್ದು ಬಹಳಷ್ಟು ಭರವಸೆ ಮೂಡಿಸಿದೆ.
ಪತ್ರಿಕೋದ್ಯಮ, ಸಿನಿಮಾಲೋಕ, ಸಾಂಸ್ಕೃತಿಕ ಚಿಂತನೆ, ಇತಿಹಾಸ ಪ್ರಜ್ಞೆ, ಕಲಾರಾಧನಾ ಮನೋಭವ, ಕಾರ್ಟೂನ್ ಅಭಿರುಚಿ, ಛಾಯಾಗ್ರಹಣ-ಪ್ರವಾಸ-ಪರಂಪರೆ-ಚಾರಿತ್ರಿಕ ಆಸಕ್ತಿ, ಡಿಜಿಟಲ್ ಯುಗ ಪರಿಜ್ಞಾನ, ಹೊಸ ತಂತ್ರಜ್ಞಾನ ಬಳಕೆಯ ಉತ್ಸಾಹ, ಜೊತೆಗೆ ಇವೆಲ್ಲಕ್ಕೂ ಮೀರಿದ ಅಪರಿಮಿತ ಉತ್ಸಾಹ ಇವುಗಳೆಲ್ಲವನ್ನೂ ಶಶಿಧರ ಚಿತ್ರದುರ್ಗ ತಮ್ಮಲ್ಲಿ ತುಂಬಿತುಳುಕಿಸಿಕೊಂಡಿದ್ದಾರೆ.
ಶಶಿಧರ ಚಿತ್ರದುರ್ಗ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Shashidhara Chitradurga
.
ಕಾಮೆಂಟ್‌ಗಳು