ಸಿಂಧು ವಿಶ್ವ ಚಾಂಪಿಯನ್
ನಮ್ಮ ಸಿಂಧು ವಿಶ್ವ ಚಾಂಪಿಯನ್ ಆದ ದಿನ
ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಪಿ.ವಿ.ಸಿಂಧು ಅವರು ಕಳೆದ ವರ್ಷ ಇದೇ ದಿನದಂದು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆಲ್ಲುವ ಮೂಲಕ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರರೆಂಬ ಎಂಬ ಕೀರ್ತಿವಂತೆಯಾದರು. ಆ ಪಂದ್ಯದಲ್ಲಿ ಪಿ.ವಿ.ಸಿಂಧು ಅಂತಿಮ ಸುತ್ತಿನ ಹಣಾಹಣಿಯಲ್ಲಿ ಜಪಾನ್ನ ಒಕುಹಾರ ಅವರನ್ನು 21-7, 21-7 ಗೇಮ್ಗಳಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಅದಕ್ಕೆ ಮುಂಚೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಸಿಂಧು 2013 ಮತ್ತು 2014ರಲ್ಲಿ ಕಂಚಿನ ಪದಕ ಗೆದ್ದಿದ್ದರು. 2017 ಹಾಗೂ 2018ರಲ್ಲಿ ಬೆಳ್ಳಿ ಪದಕ ಗಳಿಸಿದ್ದರು.
ಈ ಸುಪುತ್ರಿ ಇದೇ ದಿನ ಜನ್ಮದಿನವನ್ನು ಆಚರಿಸುತ್ತಿರುವ ತಮ್ಮ ತಾಯಿಗೆ ಈ ವಿಶ್ವಚಾಂಪಿಯನ್ ಶಿಪ್ ಗೆಲುವನ್ನು ಕೊಡುಗೆಯಾಗಿ ಅರ್ಪಿಸಿದ್ದರು. ಆ ತಾಯಿಯ ಪುಣ್ಯ ಮತ್ತು ಭಾರತ ಮಾತೆಯ ಪುಣ್ಯಗಳೆರಡೂ ಹಿರಿದು. ನಮ್ಮ ಭಾರತದ ಮಣ್ಣಿನಲ್ಲಿ ಎಂತೆಂತಹ ಪ್ರತಿಭೆಗಳು ಆಗಾಗ ಮೊಳೆಯುಕತ್ತವೆ ಎಂದು ಅಭಿಮಾನ ಮೂಡುತ್ತದೆ.
On the anniversary of P.V. Sindhu became Wolrld Badminton Champion
ಕಾಮೆಂಟ್‌ಗಳು