ಬಾರೋ ಕೃಷ್ಣಯ್ಯ
ಬಲಿಯ ಮನೆಗೆ ವಾಮನ ಬಂದಂತೆ
ಭಗೀರಥಗೆ ಶ್ರೀಗಂಗೆ ಬಂದಂತೆ
ಮುಚುಕುಂದಗೆ ಶ್ರೀಮುಕುಂದ ಬಂದಂತೆ
ಗೋಪಿಯರಿಗೆ ಗೋವಿಂದ ಬಂದಂತೆ
ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ
ವಿಭೀಷಣನ ಮನೆಗೆ ಶ್ರೀರಾಮ ಬಂದಂತೆ
ನಿನ್ನ ನಾಮವು ಎಲ್ಲ ನಾಲಿಗೆಯಲಿ ಬಂದು
ಸಲಹೋ ಪುರಂದರವಿಠಲ
(ಪುರಂದರ ದಾಸರು)
ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ರಂಗಯ್ಯ
ಬಾರೋ ನಿನ್ನ ಮುಖ ತೊರೋ ನಿನ್ನ ಸರಿ ಯಾರೋ ಜಗಧರಾಶೀಲನೆ
ಅಂದುಗೆ ಪಾಡಗವು ಕಾಲಂದುಗೆ ಕಿರು ಗೆಜ್ಜೆ
ಧಿಂಧಿಮಿ ಧಿಮಿಧಿಮಿ ಧಿಮಿ ಎನುತ
ಪೊಂಗೊಳಲನೂದುತ ಬಾರಯ್ಯ
ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತೆ
ಕಿಂಕಿಣಿ ಕಿಣಿಕಿಣಿ ಕಿಣಿರೆನುತ
ಪೊಂಗೊಳಲನೂದುತ ಬಾರಯ್ಯ
ವಾಸ ಉಡುಪಿಲಿ ನೆಲೆಯಾದಿಕೇಶವನೆ
ದಾಸ ನಿನ್ನ ಪದ ದಾಸ
ದಾಸ ನಿನ್ನ ಪದ ದಾಸ ನಿನ್ನ ಪಾದದಾಸ
ಸಲಹಲು ಬಾರಯ್ಯ
ಸಾಹಿತ್ಯ: ಕನಕದಾಸರು
(ನಮ್ಮ ಕನ್ನಡ ಕನ್ನಡ ಸಂಪದ Kannada Sampada ದಲ್ಲಿ ಮೂಡಿಬರುತ್ತಿರುವ ಗೀತೆಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್‌ಗಳು