ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಂತಾ ನರಸಿಂಹನ್


 ಶಾಂತಾ ನರಸಿಂಹನ್

   
ವಿದುಷಿ ಶಾಂತಾ ನರಸಿಂಹನ್ ಸಂಗೀತಗಾರ್ತಿಯಾಗಿ ಪ್ರಸಿದ್ಧರಾಗಿದ್ದಾರೆ.

ಶಾಂತಾ ನರಸಿಂಹನ್‌ ಅವರು ಸಂಗೀತ ವಿದ್ವಾಂಸರಿಂದ ಕೂಡಿದ ಮನೆತನದಲ್ಲಿ 1938ರ ಸೆಪ್ಟೆಂಬರ್ 23ರಂದು  ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬಿ. ಜನಾರ್ದನ ಅಯ್ಯಂಗಾರ್‌ ಅವರು ವೀಣಾ ವಿದ್ವಾಂಸರು. ತಾಯಿ ಪದ್ಮಾವತಮ್ಮ. 

ಶಾಂತಾ ಅವರಿಗೆ ಎಂಟನೆಯ ವಯಸ್ಸಿನಿಂದಲೇ ತಂದೆಯವರಿಂದ ವೀಣೆಯ ಪಾಠ ನಡೆಯಿತು. ಎಂ. ಆರ್‌. ಶಂಕರಮೂರ್ತಿ ಮತ್ತು ಆರ್‌.ಕೆ. ಶ್ರೀಕಂಠನ್‌ರವರಿಂದ ಹಾಡುಗಾರಿಕೆಯ ಶಿಕ್ಷಣ ದೊರಕಿತು. ಕನಕಪುರಂದರ ಪ್ರಶಸ್ತಿ ವಿಜೇತರಾದ ಅಣ್ಣ ಎಂ.ಜೆ.ಶ್ರೀನಿವಾಸ ಅಯ್ಯಂಗಾರ್ಯರಿಂದ ವೀಣೆಯ ಕಲಿಕೆ ಮುಂದುವರೆಯಿತು. 

ಶಾಂತಾ ನರಸಿಂಹನ್ ಅವರು 1964ರಿಂದಲೂ ಬೆಂಗಳೂರು ಆಕಾಶವಾಣಿಯ ‘ಎ’ ಗ್ರೇಡ್‌ಕಲಾವಿದೆಯಾಗಿ ದಕ್ಷಿಣ ವಲಯ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅನೇಕ ಬಾರಿ ದೂರದರ್ಶನದಿಂದಲೂ ಅವರ ಕಾರ್ಯಕ್ರಮ ಪ್ರಸಾರ ನಡೆದಿದೆ. ಕರ್ನಾಟಕ ಸರಕಾರದ ಹಲವಾರು ಸಂಗೀತ ಕಛೇರಿಗಳಲ್ಲಿ, ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್ತು, ಶ್ರೀ ಕೃಷ್ಣ ಗಾನಸಭಾ, ರಾಮೋತ್ಸವ ಸಮಿತಿ ಅಲ್ಲದೆ ಶಿವಮೊಗ್ಗ, ಮೈಸೂರು, ದಾವಣಗೆರೆ, ಧರ್ಮಸ್ಥಳ ಸಂಗೀತೋತ್ಸವ, ಬಿಜಾಪುರ ಸಂಗೀತೋತ್ಸವ, ಚೆನ್ನೈನ ಮ್ಯೂಸಿಕ್‌ ಅಕಾಡಮಿ, ಕೊಯಮತ್ತೂರು, ತಿರುವನಂತಪುರ ಹೀಗೆ ಅವರ  ಕಾರ್ಯಕ್ರಮಗಳು ಎಲ್ಲೆಡೆ ನಡೆದಿವೆ. ಭಾರತೀಯ ವಿದ್ಯಾಭವನ ಲಂಡನ್‌, ತೆಲುಗು ಅಸೋಸಿಯೇಷನ್‌ - ಲಂಡನ್‌, ಛೇಂಬರ್‌ ಆಫ್‌ ಮ್ಯೂಸಿಕ್‌ ಕನ್‌ಸರ್ಟ್ಸ್‌ ಮ್ಯಾಂಚೆಸ್ಟರ್‌; ನ್ಯೂಯಾರ್ಕಿನ ಕನ್ನಡ ಕೂಟ ಮುಂತಾದೆಡೆ ಅವರ  ಸಂಗೀತ ಕಚೇರಿಗಳು ನಡೆದಿವೆ 

ಶ್ರೀ ತ್ಯಾಗರಾಜ ಭಜನ ಸಭಾದಿಂದ ಕಲಾ ಜ್ಯೋತಿ ಪ್ರಶಸ್ತಿ, 2004ರಲ್ಲಿ ಕರ್ನಾಟಕ ಗಾನ ಕಲಾಪರಿಷತ್ತಿನಿಂದ ಪ್ರಶಸ್ತಿ, 2005ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಶಾಂತಾ ನರಸಿಂಹನ್ ಅವರಿಗೆ ಸಂದಿವೆ.

Musician Shantha Narasimhan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ