ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಿನಕರ್


 ರಾಮಧಾರಿ ಸಿಂಗ್ ದಿನಕರ್


ರಾಮಧಾರಿ ಸಿಂಗ್ ದಿನಕರ್ ಹಿಂದೀ ಸಾಹಿತ್ಯ ಲೋಕದ ಮಹಾನ್ ಸಾಹಿತಿ. 

ರಾಮಧಾರಿ ಸಿಂಗ್ ದಿನಕರ್ ಈಗಿನ ಬಿಹಾರ್ ರಾಜ್ಯಕ್ಕೆ ಸೇರಿದ ಸಿಮಾರಿಯಾ ಎಂಬಲ್ಲಿ 1908ರ ಸೆಪ್ಟೆಂಬರ್ 23ರಂದು ಜನಿಸಿದರು.  

ವೀರರಸ‍ ಪ್ರಧಾನವಾದ ರಾಮಧಾರಿ ಸಿಂಗ್ ದಿನಕರ್  ಅವರ ಕವಿತೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರಲ್ಲಿ ದೇಶಭಕ್ತಿ ಸ್ಪುರಿಸುವಲ್ಲಿ ಹೆಸರಾಗಿದ್ದವು. ಮೊದಲು ಕ್ರಾಂತಿಕಾರಿ ಹೋರಾಟದ‍ ಭಾವಗಳಿಗೆ ಹೆಸರಾಗಿದ್ದ ಅವರು ಮುಂದೆ ಗಾಂಧೀವಾದವನ್ನು ಇಷ್ಟಪಟ್ಟರು. 

ಲೋಕನಾಯಕ ಜಯಪ್ರಕಾಶ್ ನಾರಾಯಣರು ತಮ್ಮ ಜನತಾ ಆಂದೋಲನದ ಸಮಯದಲ್ಲಿ ರಾಮಧಾರಿ ಸಿಂಗ್ ದಿನಕರ್ ಅವರ "ಸಿಂಹಾಸನ್ ಖಾಲಿ ಕರೋ ಕೆ ಜನತಾ ಆತಿ ಹೈ" ಎಂಬ ಪ್ರಸಿದ್ಧ ಕವಿತೆಯನ್ನು ಉದ್ಘರಿಸುತ್ತಿದ್ದರು. 

ರಷ್ಮಿರಥಿ, ಹುಂಕಾರ್, ಪರಷುರಾಮ್ ಕಿ ಪ್ರತೀಕ್ಷಾ ಮುಂತಾದ ರಾಮಧಾರಿ ಸಿಂಗ್ ದಿನಕರ್ ಪ್ರಸಿದ್ಧ ಕೃತಿಗಳಲ್ಲಿ ವೀರರಸ ಪ್ರಧಾನವಾಗಿದೆ.  ಅವರು ಕವಿತೆಗಳಲ್ಲದೆ ಪ್ರಬಂಧ ಮತ್ತು ಇನ್ನಿತರ ರೂಪಗಳಲ್ಲೂ ಬರೆದಿದ್ದಾರೆ.  'ಸಂಸ್ಕೃತಿ ಕೆ ಚಾರ್ ಅಧ್ಯಾಯ' ಅವರ ಮತ್ತೊಂದು ಹೆಸರಾಂತ ಕೃತಿ.  ಕುರುಕ್ಷೇತ್ರ, ಊರ್ವಶಿ, ರೇಣುಕಾ, ಸ್ಮರಣಾಂಜಲಿ, ಆಗ್ ಪಾನಿ ಅಕಾಶ್, ದ್ವಂದ್ವ ಗೀತ ಮುಂತಾದವು ಅವರ ಕೃತಿಗಳಲ್ಲಿ ಸೇರಿವೆ.

ರಾಷ್ಟ್ರಕವಿ ಗೌರವಾನ್ವಿತರಾಗಿದ್ದ ರಾಮಧಾರಿ ಸಿಂಗ್ ದಿನಕರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಪದ್ಮಭೂಷಣ ಮತ್ತು ಜ್ಞಾನಪೀಠ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. 

ರಾಮಧಾರಿ ಸಿಂಗ್ ದಿನಕರ್ 1974ರ ಏಪ್ರಿಲ್ 24ರಂದು ಈ ಲೋಕವನ್ನಗಲಿದರು. 

On the birth anniversary of great poet Ramdhari Singh Dinakar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ