ಟಬು
ಟಬು
ಟಬು ಚಲನಚಿತ್ರರಂಗದ ಸುಂದರ ಪ್ರತಿಭಾವಂತ ಕಲಾವಿದೆ.
ತಬಸ್ಸುಮ್ ಫತಿಮಾ ಹಷ್ಮಿ 1971ರ ನವೆಂಬರ್ 4ರಂದು ಹೈದರಾಬಾದಿನಲ್ಲಿ ಜನಿಸಿದರು. ಹೈದರಾಬಾದು ಮತ್ತು ಮುಂಬೈಗಳಲ್ಲಿ ಅವರ ಶಿಕ್ಷಣ ನಡೆಯಿತು.
ಟಬು 1982ರಲ್ಲಿ ಬಜಾರ್ ಚಿತ್ರದಲ್ಲಿ ಮತ್ತು 1985ರಲ್ಲಿ ದೇವಾನಂದ್ ಅವರ ಹಮ್ ನೌಜವಾನ್ ಚಿತ್ರದಲ್ಲಿ ಸಣ್ಣ ಪಾತ್ರಧಾರಿಯಾಗಿ ನಟಿಸಿದರು. ಮುಂದೆ ಹಲವು ತೆಲುಗು, ಹಿಂದೀ ಚಿತ್ರಗಳಲ್ಲಿ ನಟಿಸಿ 1996ಲ್ಲಿ ಗುಲ್ಜಾರ್ ಅವರ ಮಾಚಿಸ್ ಚಿತ್ರದಲ್ಲಿ ನಟಿಸಿ ಶ್ರೇಷ್ಠ ನಟಿಯಾಗಿ ಪ್ರಥಮ ರಾಷ್ಟ್ರೀಯ ಪುರಸ್ಕಾರ ಗಳಿಸಿದರು. 2001ರಲ್ಲಿ ಚಾಂದಿನಿ ಬಾರ್ ಚಿತ್ರದ ಅಭಿನಯಕ್ಕೆ ಮತ್ತೊಮ್ಮೆ ರಾಷ್ಟ್ರೀಯ ಪ್ರಶಸ್ತಿ ಪಡೆದರು.
ಟಬು ಹಿಂದಿ ಚಿತ್ರಗಳಲ್ಲದೆ ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ, ಬಂಗಾಲಿ ಮತ್ತು ಮರಾಠಿ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಒಟ್ಟಾರೆ ಆರು ಫಿಲಂಫೇರ್ ಪ್ರಶಸ್ತಿಗಳನ್ನೂ ಗಳಿಸಿದ್ದಾರೆ. ಈ ಭಾಷೆಗಳ ಜೊತೆಗೆ ಪ್ರೆಂಚ್ ಮತ್ತು ಸ್ಪಾನಿಷ್ ಭಾಷೆಗಳನ್ನೂ ಅವರು ಕಲಿತಿದ್ದಾರಂತೆ.
ಟಬು ಅವರ ಪ್ರಸಿದ್ಧ ಚಿತ್ರಗಳಲ್ಲಿ ಹಿಂದಿಯ ವಿಜಯಪಥ್, ವಿರಾಸಾತ್, ಚಾಚಿ 420, ಬಾರ್ಡರ್, ಹು ತು ತು, ಅಸ್ತಿತ್ವಾ, ಬಿವಿ ನಂ. 1, ಹಮ್ ಸಾಥ್ ಸಾಥ್ ಹೈ, ಹೀರಾ ಫೇರಿ, ಮಕ್ಬೂಲ್, ಚೀನಿ ಕಮ್, ಹೈದರ್, ದೃಷ್ಯಮ್, ಅಂಧಾಧುನ್, ಗೋಲ್ ಮಾಲ್ ಅಗೈನ್, ಮಿಸ್ಸಿಂಗ್, ಸಂಜು; ಇಂಗ್ಲಿಷಿನ ಲೈಫ್ ಆಫ್ ಪೈ, ದ ನೇಮ್ ಸೇಕ್, ಹನುಮಾನ್, ಕಿರುತೆರೆಯ ದ ಸ್ಯೂಟಬಲ್ ಬಾಯ್; ತೆಲುಗಿನ ನಿನ್ನೆ ಪೆಲ್ಲಡಾಟಾ, ಪಾಂಡುರಂಗುಡು; ತಮಿಳಿನ ಕಾದಲ್ ದೇಶಮ್, ಇರುವರ್, ಕಂಡುಕೊಂಡೇನ್ ಕಂಡುಕೊಂಡೇನ್; ಮಲಯಾಳದ ಕಾಲಾಪಾನಿ ಮುಂತಾದ ಅನೇಕ ಚಿತ್ರಗಳು ಸೇರಿವೆ.
ಪ್ರಧಾನ ಪಾತ್ರ, ಪುಟ್ಟ ಪಾತ್ರ, ಕಲಾತ್ಮಕ ಚಿತ್ರ, ವ್ಯಾಪಾರಿ ಚಿತ್ರ ಮುಂತಾದವುಗಳ ಭೇದವಿಲ್ಲದೆ ಹಲವಾರು ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿ ಪ್ರಶಸ್ತಿ, ಜನಪ್ರಿಯತೆ, ರೂಪು, ವಿಮರ್ಶೆಗಳಲ್ಲಿ, ಜನಪ್ರಿಯತೆ ಹೀಗೆ ಬಹುರೀತಿಯಲ್ಲಿ ಹೆಸರಾದವರು.
ಟಬು ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ಸಂದಿದೆ.
On the birthday of talented and beautiful actress Tabu
ಕಾಮೆಂಟ್‌ಗಳು