ಉದಿತ್ ನಾರಾಯಣ್
ಉದಿತ್ ನಾರಾಯಣ್
‘ಬರೀ ಓಳು ಬರೀ ಓಳು’ ಎಂದು ಕನ್ನಡದಲ್ಲಿ ಹಾಡಿ, ‘ಕುಣಿ ಕುಣಿದು ಬಾರೆ’ ಎಂದು ಇಂದಿನ ಸಂಗೀತ ಪ್ರಿಯರನ್ನು ತಣಿಸಿದವರು ಪ್ರಖ್ಯಾತ ಹಿನ್ನಲೆ ಗಾಯಕ ಉದಿತ್ ನಾರಾಯಣ್.
ಉದಿತ್ ನಾರಾಯಣ್ 1955ರ ಡಿಸೆಂಬರ್ 1ರಂದು ಜನಿಸಿದರು. ಮಹಮದ್ ರಫಿ, ಕಿಶೋರ್ ಅಂತಹ ಗಾಯಕರ ನಂತರದ ತಲೆಮಾರಿನ ಪ್ರಮುಖ ಗಾಯಕರಲ್ಲಿ ಒಬ್ಬರಾಗಿರುವ ಈ ಸುರದ್ರೂಪಿ ಗಾಯಕ ಜನಿಸಿದ್ದು ನೇಪಾಳದಲ್ಲಿ.
‘ಪಾಪ್ಪಾ ಕೆಹೆತೇ ಹೈ ಬಡಾ ನಾಮ್ ಕರೇಗಾ‘ , ‘ಜಾದೂ ತೇರಿ ನಜರ್‘, ‘ಪೆಹಲಾ ನಶಾ ಪೆಹಲಾ ಖುಮಾರ್‘, ‘ಹೇ ಅಜ್ ನಬೀ ತೂ ಭೀ ಕಭೀ ಆವಾಜ್ ದೇ ಕಹೀ ಸೇ‘, ‘ಮೆಹಂದಿ ಕರಾಗೆ ಲಕ್ ನಾ’, ‘ಪರ್ದೇಶಿ ಪರ್ದೇಶಿ’, ‘ಚಾಂದ್ ಚೂಪಾ ಬಾದಲ್ ಮೇ’, ‘ಮಿತ್ ವಾ ಓ ಮಿತ್ ವಾ’, ‘ರಾಧಾ ಕೈಸೇನ ಜಲೇ’, ‘ಕುಚ್ ಕುಚ್ ಹೋತಾ ಹೈ’, ‘ಯೆಹ್ ತಾರ ವೂ ತಾರ’ ಮುಂತಾದ ಅನೇಕ ಮಧುರ ಗೀತೆಗಳನ್ನು ಹಾಡಿರುವ ಉದಿತ್ ಭಾರತದ ಬಹುಭಾಷೆಗಳಲ್ಲಿ ಬಿಡುವಿಲ್ಲದೆ ಹಿನ್ನಲೆ ಗಾಯನದಲ್ಲಿ ನಿರತರಾಗಿದ್ದವರು.
ಉದಿತ್ ನಾರಾಯಣ್ ಅವರಿಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಹಿನ್ನೆಲೆ ಗಾಯನದ ಪ್ರಶಸ್ತಿಗಳು ಮತ್ತು ಐದು ಫಿಲಂಫೇರ್ ಪ್ರಶಸ್ತಿಗಳು ಸಂದಿವೆ.
ಹಿನ್ನಲೆ ಗಾಯನದ ಜೊತೆಗೆ ಕೆಲವು ನಟನೆ, ಹಲವಾರು ಕಾರ್ಯಕ್ರಮಗಳು, ದೂರದರ್ಶನದ ಪ್ರಸಿದ್ಧ ಕಾರ್ಯಕ್ರಮಗಳು, ವಿದೇಶಿ ಯಾತ್ರೆ ಇವೆಲ್ಲವೂ ಇಂದಿನ ಬಹುತೇಕ ತಾರೆಯರಿಗಿರುವಂತೆ ಉದಿತ್ ನಾರಾಯಣರಿಗೆ ಕೂಡಾ ಉಂಟು.
On the birthday of playback singer Udit Narayan
ಕಾಮೆಂಟ್‌ಗಳು